ನ್ಯೂಸ್

‘ಕೊಡು-ಕೊಳ್ಳು’ ವ್ಯವಹಾರ ಇದ್ದರಷ್ಟೇ ಅವಕಾಶ; ಬಾಲಿವುಡ್​​ ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ಎರಿಕಾ ಫರ್ನಾಂಡೀಸ್​​ | Erica Fernandes

ಮುಂಬೈ: ನಟಿ ಎರಿಕಾ ಫರ್ನಾಂಡೀಸ್(Erica Fernandes).. ಹೆಸರು ಕೇಳಿ ಯಾರಿರಬಹದು ಎಂದು ಆಲೋಚಿಸುತ್ತಿದ್ದೀರಾ. ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಜತೆಗೆ ಜೋಡಿಯಾಗಿ ನಿನ್ನಿಂದಲೇ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ. ಬಣ್ಣದ ಜಗತ್ತಿನಲ್ಲಿ ನಿರೀಕ್ಷಿಸಿದಷ್ಟು ನಟಿಗೆ ಸಕ್ಸಸ್​​ ಒಲಿದು ಬರಲಿಲ್ಲ. ಸದ್ಯ ನಟಿ ಎರಿಕಾ ಫರ್ನಾಂಡೀಸ್​​ ಬಾಲಿವುಡ್​​​ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ನೀಡಿದ ಪಾಡಕಾಸ್ಟ್​ ಸಂದರ್ಶನವೊಂದರಲ್ಲಿ ನಟಿ ಎರಿಕಾ ಬಾಲಿವುಡ್​ ಜಗತ್ತಿನಲ್ಲಿ ಮೇಲೆಲ್ಲಾ ಥಳುಕ ಒಳಗೆ ಇರುವುದೆಲ್ಲಾ ಹುಳುಕು ಎಂದಿದ್ದಾರೆ. ಬಾಲಿವುಡ್​ನಲ್ಲಿ ಕೊಡು-ಕೊಳ್ಳು ವ್ಯವಹಾರ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ಲೈಂಗಿಕ ಸವಲತ್ತುಗಳನ್ನು ಒದಗಿಸಿದರೆ ಮಾತ್ರವೇ ಅಲ್ಲಿ ಸಿನಿಮಾ ಅವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ.

ನಾನು ಕೇಳಿರುವಂತೆ ಬಾಲಿವುಡ್​ನಲ್ಲಿ ಕೆಲವು ವಾಟ್ಸ್​ಆಫ್ ಗ್ರೂಫ್​ಗಳಿವೆ. ಆ ಗ್ರೂಪ್​ಗಳಲ್ಲಿ ಅವರು ತಾವು ಯಾರು ಯಾರೊಂದಿಗೆ ಲೈಂಗಿಕತೆ ಹೊಂದಿದ್ದೇವೆ, ಯಾರೊಂದಿಗೆ ಸಂಬಂಧ ಹೊಂದಬೇಕು? ಯಾರು ಇದಕ್ಕೆಲ್ಲಾ ಸುಲಭವಾಗಿ ಒಪ್ಪುತ್ತಾರೆ ಮತ್ತು ಯಾರು ಒಪ್ಪುವುದಿಲ್ಲ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಎರಿಕಾ ಅವರ ಈ ಹೇಳಿಕೆ ಸದ್ಯ ಬಾಲಿವುಡ್​ನಲ್ಲಿ ಬಾರಿ ಚರ್ಚೆಗಳನ್ನು ಹುಟ್ಟುಹಾಕಿವೆ. ಕಿರುತೆರೆಯಿಂದ ಸಿನಿಮಾಗೆ ಬಂದ ನಟಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿದ್ದಾಗೆ ಮತ್ತೆ ಕಿರುತೆರೆ ಕಡೆ ಮುಖ ಮಾಡಿದರು. ನಿನ್ನಿಂದಲೇ ಸಿನಿಮಾ ಜತೆಗೆ ಕನ್ನಡದಲ್ಲಿ 2015ರಲ್ಲಿ ಬಿಡುಗಡೆಯಾದ ಬುಗುರಿ ಸಿನಿಮಾದಲ್ಲಿ ಎರಿಕಾ ಫರ್ನಾಂಡೀಸ್​ ಅವರನ್ನು ನೋಡಬಹುದು. 2017ರ ಬಳಿಕ ಸಿನಿಮಾ ಅವಕಾಶಗಳು ಬರುವುದೇ ನಿಂತು ಹೋದ ಕಾರಣ ಮತ್ತೆ ಕಿರುತರೆಗೆ ಎಂಟ್ರಿ ಕೊಟ್ಟರು. ಚಿತ್ರರಂಗದಲ್ಲಿ ರಾಜಕೀಯಕ್ಕೆ ಬೇಸತ್ತು ನಟಿ ಮುಂಬೈನಿಂದ ದುಬೈಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​​)