ನ್ಯೂಸ್

75 ಕೆಜಿ ತೂಕದ ವ್ಯಕ್ತಿ ಮೈ ಮೇಲೆ ಮಲಗಿರುವಾಗ, ಕಿಸ್​ನ್ನು ಹೇಗೆ ಎಂಜಾಯ್ ಮಾಡುವುದು; ಇದು ಸ್ಟಾರ್​ ನಟಿಯ ರೋಮ್ಯಾಂಟಿಕ್ ಟಾಕ್​

ಮುಂಬೈ: ಕಳೆದ ವರ್ಷ ಬಿಡುಗಡೆಯಾದ ಮಂಗಳವಾರಂ ಚಿತ್ರ ಉತ್ತಮ ಯಶಸ್ಸು ಕಂಡಿತ್ತು. ಪಾಯಲ್ ರಜಪೂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪಾಯಲ್ ರಜಪೂತ್ ನಂತರ ಜಮೀನ್ದಾರ್ ಪತ್ನಿಯ ಪಾತ್ರ ಹೆಚ್ಚು ಹೈಲೈಟ್ ಆಗಿದೆ. ಮಲಯಾಳಂ ನಟಿ ದಿವ್ಯಾ ಪಿಳ್ಳೈ ಈ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ನಂತರ ಆಕೆಯ ಪಾತ್ರದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು.

ದಿವ್ಯಾ ಪಿಳ್ಳೈ ರೊಮ್ಯಾಂಟಿಕ್ ದೃಶ್ಯಗಳಲ್ಲಿಯೂ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳನ್ನೂ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ದಿವ್ಯಾ ಪಿಳ್ಳೈ ಮಂಗಳವಾರ ಚಿತ್ರದಲ್ಲಿನ ತನ್ನ ಪಾತ್ರಕ್ಕೆ ಅಪಾರ ಮನ್ನಣೆ ಸಿಕ್ಕಿರುವ ಕುರಿತಾಗಿ ಮಾತನಾಡಿದ್ದಾರೆ.

ದಿವ್ಯಾ ಪಿಳ್ಳೈ ಮಾತನಾಡಿ, ಸೆಟ್‌ನಲ್ಲಿ ಎಲ್ಲರ ಮುಂದೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ಸುಲಭದ ಮಾತಲ್ಲ . ಸುಮಾರು 75 ಕೆಜಿ ತೂಕದ ವ್ಯಕ್ತಿ ತನ್ನ ಮೇಲೆ ಮಲಗಿರುವಾಗ, ಕ್ಯಾಮೆರಾ ಮುಂದೆ ರೋಮ್ಯಾಂಟಿಕ್ ಎಕ್ಸ್‌ಪ್ರೆಶನ್‌ಗಳನ್ನು ನೀಡಬೇಕಾಗುತ್ತದೆ. ಅದು ಎಷ್ಟು ಕಷ್ಟ ಎಂದು ಯೋಚಿಸಿ ಎಂದಿದ್ದಾರೆ

ಆ ಸಮಯದಲ್ಲಿ ಕಿಸ್ ಸೀನ್​​ನಲ್ಲಿ ನಟಿಸುತ್ತಿದ್ದರೆ ಕಿಸ್ ಎಂಜಾಯ್ ಮಾಡುವಂತಿರಲಿಲ್ಲ. ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವಾಗ ಸಾಕಷ್ಟು ವರ್ಕೌಟ್ ಮಾಡಬೇಕು. ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಕೋಸ್ಟಾರ್‌ನೊಂದಿಗೆ ಮೊದಲೇ ಚರ್ಚಿಸಬೇಕು. ಕಷ್ಟದಲ್ಲಿರುವಾಗ ಆ ಭಾವನೆಯನ್ನು ಮುಖದಲ್ಲಿ ತೋರಿಸಿಕೊಳ್ಳಬಾರದು ಎಂದು ದಿವ್ಯಾ ಪಿಳ್ಳೈ ಹೇಳಿದರು.