ನ್ಯೂಸ್

ದೀಪಿಕಾ ಪಡುಕೋಣೆ ಫ್ಯಾನ್ಸ್​ಗೆ ಬ್ಯಾಡ್ ನ್ಯೂಸ್! ಹುಟ್ಟುವ ಮಗುವಿಗಾಗಿ ಈ...ನಿರ್ಧಾರ ತೆಗೆದುಕೊಂಡ ನಟಿ

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಕಲ್ಕಿ ಸಿನಿಮಾದ ಮೂಲಕ ದೊಡ್ಡ ಹಿಟ್ ಪಡೆದಿದ್ದಾರೆ. ಸ್ಟಾರ್​​ ನಟರೊಂದಿಗೆ ಕಾಣಿಸಿಕೊಳ್ಳುತ್ತಾ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ನಟಿ ಸಾಲು ಸಾಲು ಸೂಪರ್​ ಹಿಟ್​​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸ್ಟಾರ್​ ನಟಿ ಅಭಿಮಾನಿಗಳಿಗೆ ಒಂದು ಬ್ಯಾಡ್​​ ನ್ಯೂಸ್​ ಕೊಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರನ್ನು ಮದುವೆಯಾಗಿರುವುದು ಗೊತ್ತೇ ಇದೆ. ಸದ್ಯ ದೀಪಿಕಾ ಗರ್ಭಿಣಿ. ಸೆಪ್ಟೆಂಬರ್‌ನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡುತ್ತಾರೆ. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದ ಪ್ರಚಾರದಲ್ಲಿ ದೀಪಿಕಾ ಭಾಗವಹಿಸಿದ್ದರು. ಈ ನಡುವೆ ಇತ್ತೀಚೆಗಷ್ಟೇ ದೀಪಿಕಾ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

'ದಿ ವೈಟ್ ಲೋಟಸ್' ಅಂತರಾಷ್ಟ್ರೀಯ ವೆಬ್ ಸರಣಿಯ ಮೂರನೇ ಸೀಸನ್‌ನಲ್ಲಿ ದೀಪಿಕಾ ಪಾತ್ರವನ್ನು ಆಫರ್ ಮಾಡಲಾಗಿದೆ. ಆದರೆ ಗರ್ಭಿಣಿ ಎಂಬ ಕಾರಣಕ್ಕೆ ನಿರಾಕರಿಸಿದ್ದಾರಂತೆ. ಮುಂಬರುವ ಮಗುವಿಗಾಗಿ ದೀಪಿಕಾ ವೆಬ್ ಸರಣಿಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ದೀಪಿಕಾ ಯಾವುದೇ ಹೊಸ ಯೋಜನೆಗೆ ಸಹಿ ಹಾಕುತ್ತಿಲ್ಲ ಎಂಬ ವರದಿ ಮಾಡಲಾಗಿದೆ.

ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಮಾತು ಪ್ರಕಾರ, ದೀಪಿಕಾ ಯಾರ ಸಹಾಯವೂ ಇಲ್ಲದೇ ಮಗುವನ್ನು ನೋಡಿಕೊಳ್ಳಲು ಬಯಸಿದ್ದಾರೆ. ಅಂದರೆ ದೀಪಿಕಾ ಇತರ ಸೆಲೆಬ್ರಿಟಿಗಳಂತೆ ತನ್ನ ಮಗುವನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸುವುದಿಲ್ಲ. ಅಷ್ಟೇ ಅಲ್ಲ, ತಾಯಿಯಾದ ನಂತರ ಪತಿ ರಣವೀರ್ ಸಿಂಗ್ ಜತೆಗೆ ದೀಪಿಕಾ ತಮ್ಮ ಮಗುವನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳಲು ಬಯಸಿದ್ದಾರೆ. ಮಗುವಿನ ಜನನದ ನಂತರ, ದೀಪಿಕಾ ಸಿನಿಮಾದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಮಗುವಿನೊಂದಿಗೆ ಹೆಚ್ಚು ಸಂತೋಷದಿಂದ ಕಳೆಯಲು ಬಯಸುತ್ತಾರೆ. ಅಂದರೆ ದೀಪಿಕಾ ಸಿನಿಮಾದಿಂದ ಕೊಂಚ ಬ್ರೇಕ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಇದು ನಿಜಕ್ಕೂ ಬ್ಯಾಡ್ ನ್ಯೂಸ್ ಆಗಿದೆ.