ಕೊಚ್ಚಿ: ಬಹುಭಾಷಾ ಮಲೆಯಾಳಿ ನಟಿಯೊಬ್ಬರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದಿಲೀಪ್ಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರ್ಟ್ಗೆ ಪ್ರಾಸಿಕ್ಯೂಷನ್ ಮನವಿ ಮಾಡಿದೆ.
ದಿಲೀಪ್ ಜಾಮೀನಿನ ಮೇಲೆ ಹೊರಗಿದ್ದರೂ, ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ. ಇದರ ವಿಚಾರಣೆ ಇಂದು ನಡೆಯಲಿದೆ.
ಕೋವಿಡ್ 19 ರಜಾಕಾಲದ ಬಳಿಕ ವಿಶೇಷ ಕೋರ್ಟ್ ಜೂನ್ ಕೊನೆಯಲ್ಲಿ ಮತ್ತೆ ವಿಚಾರಣೆ ಆರಂಭಿಸಿತ್ತು. ಇದರ ಬೆನ್ನಿಗೇ ವಿಶೇಷ ಕೋರ್ಟ್ನ ಜಡ್ಜ್ ಕೋರ್ಟ್ ಪ್ರೊಸೀಜರ್ಸ್ ಪೂರೈಸುವುದಕ್ಕೆ ಆರು ತಿಂಗಳ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. (ಏಜೆನ್ಸೀಸ್)