ನ್ಯೂಸ್

ಮಕ್ಕಳಿಗೆ RCB ಜರ್ಸಿ ತೊಡಿಸಿ ಫೋಟೋಶೂಟ್ ಮಾಡಿಸಿದ ನಟಿ ಅಮೂಲ್ಯ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಅಮೂಲ್ಯ ಅವರು ಅವಳಿ ಮಕ್ಕಳ ತಾಯಿ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆಗಾಗ ತಮ್ಮ ಮಕ್ಕಳ ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳುವ ನಟಿ ಇದೀಗ ಕೊಂಚ ವಿಶೇಷವಾಗಿರುವ ಫೋಟೋವನ್ನು ಶೇರ್​​ ಮಾಡಿಕೊಂಡಿದ್ದಾರೆ.

ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಆರ್‌ಸಿಬಿ ಜರ್ಸಿ ಧರಿಸಿದ್ದಾರೆ. ಮಕ್ಕಳ ಜರ್ಸಿ ಮೇಲೆ ಅವರ ಹೆಸರುಗಳಿದೆ. ಇಬ್ಬರ ಕೈಗೆ ಬ್ಯಾಟ್ ಆಂಡ್ ಬಾಲ್ ಕೊಟ್ಟಿದ್ದಾರೆ. ಆರ್‌ಸಿಬಿ ಮತ್ತು ಸಿಎಸ್‌ಕೆ ಮಿಂಚಲಿದ್ದಾರೆ. ನನ್ನ ಮುದ್ದು ಅವಳಿ ಮಕ್ಕಳು ಅಥರ್ವ್‌ ಮತ್ತು ಆಧವ್ ಆರ್‌ಸಿಬಿಗೆ ಚಿಯರ್ ಮಾಡಲು ರೆಡಿಯಾಗಿದ್ದಾರೆ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.

ಫೋಟೋ ಮತ್ತು ವಿಡಿಯೋವನ್ನು ನಟಿ ಇನ್​ಸ್ಟಾಗ್ರಾಮ್​​ನಲ್ಲು ಹಂಚಿಕೊಂಡಿದ್ದಾರೆ. ಈ ಫೋಟೋಳು ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಮುಂದಿನ ಕ್ರಿಕೆಟರ್ಸ್​​ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.