ಹರೀಶ್ ಜತೆ ಬಸವಂತರಾಯಗೌಡ, ಆನಂದ್​ 
ನ್ಯೂಸ್

‘ಚಂದ್ರಹಾಸ’ ಚಡ್ಡಿಬಡ್ಡಿ : ಹೊಸಬರ ಚಿತ್ರದ ಹಾಡಿಗೆ ಧ್ವನಿಯಾದ ನಟರಾದ ಶರಣ್- ನವೀನ್ ಸಜ್ಜು

ಪ್ರಮುಖ ಮುಖ್ಯಾಂಶಗಳು

  • ಕಾಮಿಡಿ ಕಿಲಾಡಿ ಹರೀಶ್ ಹಿರಿಯೂರ್ ಅಭಿನಯದ ಸಿನಿಮಾ
  • ಗೆಳತನ ಸಾರುವ ಹಾಡು ರಿಲೀಸ್
  • ಹಾಡಿಗೆ ಸಾಹಿತ್ಯ ಒದಗಿಸಿದ ನಿರ್ದೇಶಕ ಯೋಗರಾಜ್ ಭಟ್​
ಬೆಂಗಳೂರು: ಸ್ಯಾಂಡಲ್‌ವುಡ್ ಹಾಸ್ಯ ನಟ ಶರಣ್ ಅಭಿನಯದ ಜತೆಗೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ‘ರಾಜ ರಾಜೇಂದ್ರ’, ‘ವಜ್ರಕಾಯ’, ‘ಬುಲೆಟ್ ಬಸ್ಯಾ’, ‘ಮರ್ಯಾದೆ ಪ್ರಶ್ನೆ’ ಸೇರಿ ಹಲವು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ. ಇದೀಗ ‘ಚಂದ್ರಹಾಸ’ ಚಿತ್ರದ ‘ಚಡ್ಡಿ ಬಡ್ಡಿ’ ಎಂಬ ಹಾಡು ಹಾಡುವ ಮೂಲಕ ಹೊಸಬರ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ‘ಕಾಮಿಡಿ ಕಿಲಾಡಿ’ ರಿಯಾಲಿಟಿ ಶೋ ಖ್ಯಾತಿಯ ಹರೀಶ್ ಹಿರಿಯೂರ್ ಅಭಿನಯದ, ಆನಂದ್ ಎಸ್. ಕಲಕಬಂಡಿ ನಿರ್ದೇಶನದ ‘ಚಂದ್ರಹಾಸ’ ಚಿತ್ರದ ‘ಚಡ್ಡಿ ಬಡ್ಡಿ’ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಯೋಗರಾಜ್ ಭಟ್ ಸಾಹಿತ್ಯ ಇರುವ ಈ ಹಾಡಿಗೆ ಶರಣ್ ಜತೆ ಗಾಯಕ ನವೀನ್ ಸಜ್ಜು ಜತೆಗೂಡಿ ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಇರುವ ಈ ಹಾಡು ಸದ್ಯ ವೈರಲ್ ಆಗುತ್ತಿದೆ. ಹರೀಶ್ ಹಿರಿಯೂರ್‌ಗೆ ಇಲ್ಲಿ ‘ಕಬಂಧ’ ಖ್ಯಾತಿಯ ಛಾಯಾಶ್ರೀ ಉಮೇಶ್ ಜೋಡಿಯಾಗಿದ್ದಾರೆ. ಸ್ನೇಹಿತನ ಪಾತ್ರದಲ್ಲಿ ನಿಂಗರಾಜು ಮಂಡ್ಯ ಅಭಿನಯಿಸಿದ್ದು, ಸಂತೋಷ್, ಸೂರ್ಯ ಕಲಾ, ಜ್ಯೋತಿ ಮಂಗಳೂರು, ಕಳಕಪ್ಪ ತಳವಾರ್ ಕಲಾಬಳಗದಲ್ಲಿದ್ದಾರೆ. ಚೇತನ್ ಶರ್ಮಾ ಛಾಯಾಗ್ರಹಣ, ವಿ.ಗಿರೀಶ್ ಎಂ.ಸಿ. ಹಳ್ಳಿ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಚಂದ್ರಹಾಸ ಸಿನಿಮಾವನ್ನು ಬಸವಂತಗೌಡ ಪಾಟೀಲ್‌ ನಿರ್ಮಾಣ ಮಾಡಿದ್ದು ಬಸಣ್ಣ ಕಮತ್ತರ್‌ ಸಹ ನಿರ್ಮಾಪಕರಾಗಿದ್ದಾರೆ.