ನ್ಯೂಸ್

ಜವಾಬ್ದಾರಿಯಿಂದ ಮಾತನಾಡಿ..ಸುರೇಖಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಟ-ನಟಿಯರು | Actors Counter

ಹೈದ್ರಾಬಾದ್​: ಸಚಿವೆ ಕೊಂಡಾ ( konda surekha )ಸುರೇಖಾ ತೆಲಂಗಾಣ ಬಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ( KTR ) ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದು ಗೊತ್ತೇ ಇದೆ.. ಕೆಟಿಆರ್ ವರ್ತನೆಯಿಂದ ಚಿತ್ರರಂಗದ ಹಲವರು ಮುಜುಗರಕ್ಕೊಳಗಾಗಿದ್ದಾರೆ ಎಂದು ತೆಲಂಗಾಣ ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. ಅವರ ಈ ಕಾಮೆಂಟ್​ಗೆ ಟಾಲಿವುಡ್  ನಟ- ನಟಿಯರು ಆಕ್ರೋಶ (Actors Counter ) ವ್ಯಕ್ತಪಡಿಸಿದ್ದಾರೆ.

ಬೇಗ ಮದುವೆಯಾಗಿ ಇಂಡಸ್ಟ್ರಿ ತೊರೆಯಲು ಕೆಟಿಆರ್ ಕಾರಣ ಎಂದು ಕೆಲ ನಾಯಕಿಯರು ಟೀಕಿಸಿದ್ದಾರೆ. ಅಮಲು ಪದಾರ್ಥಗಳ ಚಟ ಹೊಂದಿದ್ದ ಈತ ಚಿತ್ರರಂಗದ ಕೆಲವರನ್ನು ಇದಕ್ಕೆ ದಾಸರನ್ನಾಗಿಸಿದ್ದ ಎನ್ನಲಾಗಿದೆ. ಜೊತೆಗೆ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎಂದು ಹೇಳಿದ್ದಾರೆ.

ನಾಗ ಚೈತನ್ಯ- ಸಮಂತಾ ಬೇರೆಯಾಗಲು Ktr ಕಾರಣ : ಸುರೇಖಾ ಆರೋಪ

ಬಾಪುಘಾಟ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಟಾಲಿವುಡ್ ರಿಯಲ್ ಲೈಫ್ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎನ್ನಲಾಗುತ್ತಿದೆ ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಕೆಟಿಆರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಲವು ಸಿನಿಮಾ ನಾಯಕಿಯರ ಜೀವನದೊಂದಿಗೆ ಆಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ನಾಯಕಿಯರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ನಾಶ ಮಾಡಿದ್ದಾರೆ. ನಾಯಕಿಯರು ಬೇಗ ಮದುವೆಯಾಗದೇ ಇರಲು ಕಾರಣ ಕೆಟಿಆರ್. ಕೆಟಿಆರ್ ನಾಯಕಿಯರ ಜೀವನ ಹಾಳು ಮಾಡಿದ್ದು ಟಾಲಿವುಡ್ ನ ಹಿರಿಯರೆಲ್ಲರಿಗೂ ಗೊತ್ತು ಎಂದು ಸಾಲುಸಾಲು ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

 ‘ಎನ್ ಕನ್ವೆನ್ಷನ್​ ಕಟ್ಟಡ ಒಡೆಯಬಾರದು ಎಂದರೆ ಸಮಂತಾಳನ್ನು ನನ್ನ ಬಳಿ ಕಳಿಸಿ ಎಂದು ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಎಂದು ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಎಂದು ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್​ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ.

ಈ ಕಾಮೆಂಟ್‌ಗಳು ಬಂದಾಗಿನಿಂದ ಕಾಂಗ್ರೆಸ್-ಬಿಆರ್‌ಎಸ್ ಮತ್ತು ಚೈತು ಮತ್ತು ಸ್ಯಾಮ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಸುರೇಖಾ ಅವರ ಈ ಕಾಮೆಂಟ್‌ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಆರ್‌ಎಸ್ ಕೂಡ ಈ ಆರೋಪಗಳನ್ನು ಅಲ್ಲಗಳೆಯುತ್ತಿದೆ.

ಸಚಿವೆ ಮೇಲೆ ಜೂನಿಯರ್ ಎನ್ ಟಿಆರ್ ಫೈರ್ : ಸಚಿವೆ ಕೊಂಡ ಸುರೇಖಾ ಅವರ ಕಾಮೆಂಟ್‌ಗಳಿಗೆ ಹೀರೋ ಜೂನಿಯರ್ ಎನ್‌ಟಿಆರ್ ಕೂಡ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.  ವೈಯಕ್ತಿಕ ಜೀವನವನ್ನು ರಾಜಕೀಯಕ್ಕೆ ಎಳೆದರು. ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘನತೆಯನ್ನು ಕಾಪಾಡಿಕೊಳ್ಳಬೇಕು. ಚಿತ್ರರಂಗದ ಬಗ್ಗೆ ಆಧಾರ ರಹಿತ ಹೇಳಿಕೆಗಳನ್ನು ನೋಡಿ ಬೇಸರವಾಯಿತು. ಇತರರು ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದರೆ ನಾವು ಮೌನವಾಗಿವುದು ಹೇಗೆ ಎಂದು ಎನ್‌ಟಿಆರ್ ಪೋಸ್ಟ್​​ ಮಾಡಿದ್ದಾರೆ.

ನಟ ನಾನಿ ಪ್ರತಿಕ್ರಿಯೆ

:  ರಾಜಕಾರಣಿಗಳು ಏನು ಹೇಳಿದರೂ ತಪ್ಪಿಸಿಕೊಳ್ಳಬಹುದು ಎಂದುಕೊಳ್ಳುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ನಿಮ್ಮ ಮಾತುಗಳು ತುಂಬಾ ಬೇಜವಾಬ್ದಾರಿಯಾಗಿರುವಾಗ ನೀವು ಜನರಿಗೆ ಜವಾಬ್ದಾರರಾಗಿರುತ್ತೀರಿ ಎಂದು ನಿರೀಕ್ಷಿಸುವುದು ಮೂರ್ಖತನವಾಗಿದೆ. ಗೌರವಾನ್ವಿತ ಸ್ಥಾನದಲ್ಲಿರುವವರು ಮಾಧ್ಯಮಗಳ ಮುಂದೆ ಈ ರೀತಿ ಆಧಾರ ರಹಿತವಾಗಿ ಮಾತನಾಡುವುದು ಸರಿಯಲ್ಲ. ಇದನ್ನು ಎಲ್ಲರೂ ಖಂಡಿಸಬೇಕು' ಎಂದು ಟ್ವೀಟ್ ಮಾಡಿದ್ದಾರೆ.

ಸಚಿವೆಗೆ ಹಿಗ್ಗಾಮುಗ್ಗಾ ಥರಾಟೆ ತೆಗೆದುಕೊಂಡ ಅಕ್ಕಿನೇನಿ ಅಖಿಲ್

: 'ಅಮ್ಮಾ.. ನಿಮ್ಮ ಪ್ರತಿ ಮಾತನ್ನೂ ನಾನು ಬೆಂಬಲಿಸುತ್ತೇನೆ. ಇಂತಹ ಅರ್ಥವಿಲ್ಲದ ವಿಷಯಕ್ಕೆ ನೀವು ಪ್ರತಿಕ್ರಿಯಿಸಬೇಕಾಗಿ ಬಂದಿದ್ದಕ್ಕೆ ನನಗೆ ವಿಷಾದವಿದೆ. ಆದರೆ ಕೆಲವೊಮ್ಮೆ ಇಂತಹ ಸಾಮಾಜಿಕ ಕಿಡಿಗೇಡಿಗಳ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಚಿವೆ  ಕ್ಷಮೆಯಾಚಿಸಬೇಕು ಎಂದು ಖುಷ್ಬೂ ಆಗ್ರಹ

: ಸಚಿವೆ ಕೊಂಡಾ ಸುರೇಖಾ ಅವರ ಹೇಳಿಕೆಗೆ ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಸುರೇಖಾ, ನಿನ್ನ ಮೌಲ್ಯಗಳಿಗೆ ಏನಾಯಿತು? ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಚಿತ್ರರಂಗದ ಬಗ್ಗೆ ಭಯಾನಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಇಂತಹ ಆಧಾರ ರಹಿತ ಆರೋಪಗಳನ್ನು ನೋಡಿಕೊಂಡು ಚಿತ್ರರಂಗವೇ ನಿಲ್ಲುವಂತಿಲ್ಲ. ‘ನೀವು ಇಡೀ ಚಿತ್ರರಂಗಕ್ಕೆ ಹಾಗೂ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಟ್ವೀಟ್​​ ಮಾಡಿದ್ದಾರೆ.