ನ್ಯೂಸ್

ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ದೂರ ಇಟ್ಟಿದ್ರು : ವಿನೋದ್ ​ರಾಜ್​​

ಬೆಂಗಳೂರು: ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ನಿನ್ನೆ ಅಂತ್ಯಕ್ರೀಯೆ ಕೂಡಾ ನಡೆದಿದೆ. ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ ಯುವರಾಜ್ ಆಗಮಿಸಿದ್ದಾರೆ.

ಖಾಸಗಿವಾಹಿನಿ ಜತೆ ಮಾಡನಾಡಿದ ಲೀಲಾವತಿ ಪುತ್ರ ಹಾಗೂ ನಟ ವಿನೋದ್ ರಾಜ್​ ತಮ್ಮ ಪತ್ನಿ ಹಾಗೂ ಪುತ್ರನ ಬಗ್ಗೆ ಮಾತನಾಡಿದ್ದಾರೆ.

ನನ್ನ ತಾಯಿ ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ ಅದೇ ರೀತಿ ಯುವರಾಜ್‌ಗೂ ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ. ಚೆನ್ನೈಯಲ್ಲಿ ವಾಸವಾಗಿದ್ದರೂ ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ. ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ಮದ್ರಾಸ್‌ನಲ್ಲಿಟ್ಟರು. ಮಗನ ವಿದ್ಯಾಬ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೇವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.

ವಯೋಸಹಕ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​​ನ ಹಿರಿಯ ಕಲಾವಿದೆ 85 ವರ್ಷದ ಲೀಲಾವತಿ ಅವರು 2 ದಿನಗಳ ಹಿಂದೆ ನಿಧನರಾಗಿದ್ದರು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿದೆ. ಸಾಕಷ್ಟು ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿ ಬಾರದ ಲೋಕಕ್ಕೆ ನಟಿ ಲೀಲಾವತಿ ಅವರು ಹೋಗಿದ್ದಾರೆ.