ನ್ಯೂಸ್

ಡಾಲಿ ಚಾಯ್​ವಾಲಾ ಬಯೋಪಿಕ್​ನಲ್ಲಿ ಬಾಲಿವುಡ್​ ನಟ ವರುಣ್ ಧವನ್​! ಇದು ನಿಜವೇ? ಇಲ್ಲಿದೆ ಅಸಲಿ ಸಂಗತಿ

ಮುಂಬೈ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಒಬ್ಬ ಸಾಮಾನ್ಯ ಟೀ ವ್ಯಾಪಾರಿ ಅಂಗಡಿಗೆ ಭೇಟಿ ಕೊಟ್ಟು, ಅಲ್ಲಿಯೇ ಚಹಾ ಸೇವನೆ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅಂದಿನಿಂದ ಇಂದಿನವರೆಗೂ ಈ ವ್ಯಕ್ತಿ ಸೋಷಿಯಲ್ ಮೀಡಿಯಾದ ಸೆನ್ಸೇಷನ್​ ಆಗಿದ್ದು, ಬಾಲಿವುಡ್​ನ ಕಲಾವಿದರು ಸಹ ಈ​​ ಡಾಲಿ ಚಾಯ್‌ವಾಲಾರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದಾರೆ.

ಯಾರು ಡಾಲಿ ಚಾಯ್‌ವಾಲಾ?

ಈತನ ನಿಜವಾದ ಹೆಸರು ತಿಳಿದಿಲ್ಲವಾದರೂ, ಬಿಲ್ ಗೇಟ್ಸ್ ಭೇಟಿ ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಡಾಲಿ ಚಾಯ್ವಾಲಾ, ನೆಟ್ಟಿಗರಿಂದ ಅಪಾರ ಮನ್ನಣೆ ಕೂಡ ಗಳಿಸಿದ್ದಾರೆ. ನಾಗ್ಪುರದ ರಸ್ತೆ ಬದಿಯ ಅಂಗಡಿಯಲ್ಲಿ ಡಾಲಿ ಚಹಾ ವ್ಯಾಪಾರ ಮಾಡುತ್ತ, ತಮ್ಮ ಗ್ರಾಹಕರನ್ನು ವಿಶಿಷ್ಟ ಶೈಲಿಯಿಂದಲೇ ಸೆಳೆಯುತ್ತಾರೆ. ಡಾಲಿ ಟೀ ಕೊಡುವ ಸ್ಟೈಲ್​ಗೆ ಫಿದಾ ಆಗಿರುವ ನೆಟ್ಟಿಗರು, ಅವರ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಆಗಾಗ್ಗೆ ವೈರಲ್ ಮಾಡುತ್ತಿರುತ್ತಾರೆ.

ಇದೆಲ್ಲದರ ಮಧ್ಯೆ ಇದೀಗ ಹೊಸ ಸುದ್ದಿಯೊಂದು ನೆಟ್ಟಿಗರನ್ನು ಹಾಗೂ ಸಿನಿಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದ್ದು, ಒಂದು ನಿಮಿಷ ದಂಗಾಗುವಂತೆ ಮಾಡಿದೆ. ಇಷ್ಟು ದಿನ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದ ಡಾಲಿ ಚಾಯ್​ವಾಲಾ ಇದೀಗ ತೆರೆಮೇಲೆ ಬರಲಿದ್ದಾರೆ ಎಂಬ ಸಂಗತಿ ಸದ್ಯ ಅನೇಕರನ್ನು ತೀವ್ರ ಗೊಂದಲಕ್ಕೆ ತಳ್ಳಿದೆ. ಬಾಲಿವುಡ್​ನ ಸ್ಟಾರ್ ನಟ ವರುಣ್ ಧವನ್​ ಡಾಲಿ ಅವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದು ನಿಜವೇ ಇರಬಹುದು ಎಂದು ಊಹಿಸಿದ್ದಾರೆ. ಆದ್ರೆ, ಕೆಲವರು ನಟನ ವಿರುದ್ಧ ಭಾರೀ ಅಸಮಾಧಾನ ಹೊರಹಾಕಿದ್ದು, ಇಂತಹ ಸಿನಿಮಾ ಅವಶ್ಯಕತೆ ಇಲ್ಲ. ಇದು ಅವರವರ ಇಷ್ಟಕ್ಕೆ ಹಾಕಿಕೊಳ್ಳುವ ವಿಡಿಯೋ, ಎಲ್ಲರ ಗಮನಸೆಳೆಯುವ ಗಿಮಿಕ್ ಅಷ್ಟೇ. ಡಾಲಿ ಅವರ ಬಯೋಪಿಕ್ ಮಾಡುವುದು ಸರಿಯಲ್ಲ. ಅವರ ಬದಲಿಗೆ ಸ್ಪೂರ್ತಿ ನೀಡುವ ಎಷ್ಟೋ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲೇ ಇರುತ್ತಾರೆ. ಅಂತವರನ್ನು ಮೊದಲು ಗಮನಿಸಿ ಎಂದಿದ್ದಾರೆ,(ಏಜೆನ್ಸೀಸ್).