ಮುಂಬೈ : ಟೆಲಿವಿಷನ್ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರಾಮ್ ಕಪೂರ್ ನವನವೀನ ಕಾರುಗಳನ್ನು ಕೊಳ್ಳುವುದಕ್ಕೆ ಹೆಸರಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಗ್ಯಾರೇಜಿಗೆ ಸೇರಿಸಿಕೊಂಡ ವಾಹನ ಯಾವುದು ಗೊತ್ತೆ? 1.84 ಕೋಟಿ ರೂ.ಗಳ ಶೋರೂಂ ಬೆಲೆಯುಳ್ಳ ಪಾರ್ಶೆ 911 ಕಾರ್ರೆರಾ ಎಸ್!
ಪಾರ್ಶೆ ಸೆಂಟರ್ ಮುಂಬೈನಿಂದ ರಾಮ್ ಕಪೂರ್ ದಂಪತಿ ಹೊಸ ಕಾರಿನ ಡೆಲಿವರಿ ಪಡೆದ ಫೋಟೊವನ್ನು ಕಂಪೆನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದೆ. ಅವರು ಖರೀದಿಸಿರುವ ಜೆಂಟಿಯನ್ ಬ್ಲೂ ಮೆಟಾಲಿಕ್ ಪೇಂಟ್ ಹೊಂದಿದ ಟೂ-ಡೋರ್ ಕೂಪ್ ಆಕರ್ಷಕವಾಗಿದೆ.
ಪಾರ್ಶೆ 911 ಕಾರ್ರೆರಾ ಎಸ್ ಮಾಡೆಲ್ ಭಾರತದಲ್ಲಿ ಮೂರು ವಿಧಗಳಲ್ಲಿ ಬರುತ್ತದೆ - ಕೂಪ್, ಕಾಬ್ರಿಯೋಲೆಟ್ ಮತ್ತು ಟರ್ಗಾ. 3.0-ಲೀಟರ್-6-ಸಿಲಿಂಡರ್ ಹೊಂದಿದ, ಹಿಂಭಾಗದಲ್ಲಿ ಅಳವಡಿಸಲಾದ ಟರ್ಬೋಚಾರ್ಜಡ್ ಇಂಜಿನ್ನೊಂದಿಗೆ ಬರುವ ಈ ಮಾಡೆಲ್ನಲ್ಲಿ ಮೋಟಾರಿಗೆ 8-ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷಿನ್ ಸೌಲಭ್ಯವಿದೆ. ಸೊನ್ನೆಯಿಂದ 100 ಕಿಲೋಮೀಟರ್ ಪರ್ ಅವರ್ ವೇಗವನ್ನು 3.7 ಸೆಕೆಂಡುಗಳಲ್ಲಿ ಈ ಕಾರು ಸಾಧಿಸಬಲ್ಲದು. 306 ಕಿಲೋಮೀಟರ್ ಪರ್ ಅವರ್ ವೇಗದವರೆಗೆ ಓಡಬಲ್ಲದು ಎನ್ನಲಾಗಿದೆ. (ಏಜೆನ್ಸೀಸ್)