ನ್ಯೂಸ್

VIDEO | ಅಭಿಮಾನಿಯ ಮಗುವನ್ನು ಎತ್ತಿಕೊಳ್ಳಲು ನಿರಾಕರಿಸಿದ ನಟ ಪವನ್ ಕಲ್ಯಾಣ್; ಫ್ಯಾನ್ಸ್​​ ಹೇಳಿದ್ದೇನು?

ಹೈದರಾಬಾದ್​: ಸ್ಟಾರ್ ನಟ ಪವನ್ ಕಲ್ಯಾಣ್ ಪ್ರಸ್ತುತ ವಾರಾಹಿ ಯಾತ್ರೆಯಲ್ಲಿದ್ದಾರೆ. ಈ ಕಾರ್ಯಕ್ರಮದ ಹಿನ್ನೆಲೆ ಅವರು ವಿಶಾಖ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಅಭಿಮಾನಿಯೊಬ್ಬ ಪವನ್ ಕಲ್ಯಾಣ್​ ತನ್ನ ಮಗುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಳ್ಳುವಂತೆ ಕೇಳಿದ್ದಾನೆ. ಅದಕ್ಕೆ ಪವನ್ ನಿರಾಕರಿಸಿ ಸ್ಥಳದಿಂದ ತೆರಳಿದ್ದಾರೆ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಲಿದೆ.

ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿದ ಪವನ್ ಕಲ್ಯಾಣ್ ಹೊರಬರುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಆತನ ಮುಂದೆ ಬಂದು ತನ್ನ ಮಗುವನ್ನು ಪವನ್ ಕಲ್ಯಾಣ್​ ಅವರು ಎತ್ತಿಕೊಳ್ಳುವಂತೆ ಕೇಳಿದ್ದಾನೆ. ಆದರೆ ಪವನ್ ನಿರ್ಲಕ್ಷ್ಯ ಮುಂದುವರಿಸಿದ್ದರಿಂದ ಅಭಿಮಾನಿ ಪವನ್ ಕೈ ಹಿಡಿದು ಮಗುವನ್ನು ಕೊಡಲು ಯತ್ನಿಸಿದ್ದಾನೆ. ಆ ಗೊಂದಲದಲ್ಲಿ ಪವನ್ ಮಗುವನ್ನು ಕೈಗೆ ತೆಗೆದುಕೊಂಡರೂ ಹಿಡಿಯಲಾರದೆ ತಕ್ಷಣ ಮಗುವನ್ನು ವಾಪಸ್ ಕೊಟ್ಟಿದ್ದಾರೆ. ಇದರಿಂದ ಗಾಬರಿಗೊಂಡ ಮಗು ಅಳಲು ಪ್ರಾರಂಭಿಸುತ್ತದೆ.

ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಕೆಲವರು ಪವನ್ ಕಲ್ಯಾಣ್ ಅವರನ್ನು ಟೀಕಿಸುತ್ತಿದ್ದಾರೆ. ಆದರೆ ಕೆಲ ನೆಟ್ಟಿಗರು, ತಂದೆಗೆ ಮಗುವಿನ ಬಗ್ಗೆ ಎಚ್ಚರ ವಹಿಸಿಲ್ಲ, ಯಾರೇ ತಪ್ಪು ಮಾಡಿದರೂ ಮಗುಗೆ ನೋಯುತ್ತದೆ. ಹಾಗಾಗಿ ಅಭಿಮಾನಿಗಳು ತಮ್ಮ ನಾಯಕನ ಬಗ್ಗೆ ಪ್ರೀತಿ ತೋರಿಸುವ ಬಗ್ಗೆ ಸ್ವಲ್ಪ ಎಚ್ಚರದಿಂದಿರಬೇಕು ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.