ಬೆಂಗಳೂರು: ಸ್ಯಾಂಡಲ್ವುಡ್ ನಟ ನಾಗಭೂಷಣ್ ಬಹುಕಾಲದ ಗೆಳತಿ ಪೂಜಾ ಪ್ರಕಾಶ್ ಜತೆ ಮದುವೆ ಆಗುತ್ತಿದ್ದಾರೆ. ನಾಗಭೂಷಣ್ ಅವರು ಕೈ ಹಿಡಿಯುವ ಹುಡುಗಿ ಪೂಜಾ ಪ್ರಕಾಶ್ ಯಾರು ಎನ್ನುವ ಅಭಿಮಾನಿಗಳು ಪ್ರಶ್ನೆಗೆ ಉತ್ತರ ಇಲ್ಲಿದೆ.
ನಾಗಭೂಷಣ್ ಮತ್ತು ಪೂಜಾ ಕಲ್ಯಾಣದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನ್ನಲ್ಲಿ ತೊಡಗಿಕೊಂಡಿರುವ ಪೂಜಾ ಅವರು ಸಾಕಷ್ಟು ಕಲಾವಿದರ ಚಿತ್ರವನ್ನು ಬಿಡಿಸಿದ್ದಾರೆ.
ಪೂಜಾ ಪ್ರಕಾಶ್, ನಾಗಭೂಷಣ್ ಅವರ ವಿವಾಹ ಇಂದು ಬೆಳಗಾವಿಯಲ್ಲಿ ನಡೆಯುತ್ತಿದೆ. ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.
ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿರುವ ನಾಗಭೂಷಣ್, ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ.