ನ್ಯೂಸ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಗರು ಪಲ್ಯ ನಟ ನಾಗಭೂಷಣ್‌

ಬೆಂಗಳೂರು: ಸ್ಯಾಂಡಲ್​ವುಡ್​ನ ಹಾಸ್ಯನಟ ನಾಗಭೂಷಣ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಟ ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಜೋಡಿ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಡಾಲಿ ಧನಂಜಯ್ ಸೇರಿದಂತೆ ನಾಗಭೂಷಣ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ನಟ, ನಿರ್ಮಾಪಕ ಡಾಲಿ ಧನಂಜಯ್, ನವೀನ್ ಶಂಕರ್‌, ಸತೀಶ್ ನೀನಾಸಂ, ನಟಿ ಅಮೃತಾ, ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಅವರು ಭಾಗಿಯಾಗಿದ್ದಾರೆ. ನೆಚ್ಚಿನ ಸ್ನೇಹಿತನ ಮದುವೆಯಲ್ಲಿ ಭಾಗಿಯಾದ ಸ್ನೇಹಿತರು ಮದುವೆಯ ಶುಭಾಶಯ ಕೋರಿದ್ದಾರೆ. ಪೂಜಾ ಪ್ರಕಾಶ್ ಜತೆ ಇಂದು ಬೆಳಗಾವಿಯಲ್ಲಿ ಅವರು ಮದುವೆ ಆಗಿದ್ದು, ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.

ನಾಗಭೂಷಣ್ ಅವರು ಕೈ ಹಿಡಿದಿರುವ ಹುಡುಗಿ ಪೂಜಾ ಪ್ರಕಾಶ್​ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾಗಭೂಷಣ್‌ ಕೂಡ ಇತ್ತೀಚೆಗೆ ಡಾಲಿ ಧನಂಜಯ್ ನಿರ್ಮಿಸಿದ್ದ ‘ಟಗರು ಪಲ್ಯ’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.