ಕಿಚ್ಚ ಸುದೀಪ್, ಸಂಚಿತ್ ಸಂಜೀವ್
ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್, ಶುಕ್ರವಾರ (ಜೂ. 5) ಬಿಡುಗಡೆಯಾದ "ಮ್ಯಾಂಗೋ ಪಚ್ಚ' ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸುದೀಪ್ ಪತ್ನಿ ಪ್ರಿಯಾ ಮತ್ತು ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ & ಯೋಗಿ ಜಿ. ರಾಜ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ವಿವೇಕ ಆ್ಯಕ್ಷನ್&ಕಟ್ ಹೇಳಿದ್ದಾರೆ. "ಮ್ಯಾಂಗೋ ಪಚ್ಚ'ನಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿ ಚಿತ್ರಂಡ ಮಾಧ್ಯಗೋಷ್ಠಿ ಕರೆದಿತ್ತು. ಮುಹೂರ್ತದ ಬಳಿಕ ಮೊದಲ ಬಾರಿಗೆ ಸಂಚಿತ್ರನ್ನು ಪರಿಚಯಿಸಲಾಯಿತು. ಇನ್ನು ಸ್ಟಾರ್ ಮಕ್ಕಳು ಮತ್ತು ಸಂಬಂಧಿಕರು ಚಿತ್ರರಂಗಕ್ಕೆ ಹೆಚ್ಚಾಗಿ ಬರುತ್ತಿರುವ ಬಗ್ಗೆ ನೆಪೋಟಿಸಂ (ಸ್ವಜನ ಪಕ್ಷಪಾತ) ಆರೋಪಗಳು ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಈ ಬಗ್ಗೆ ನಟ ಸುದೀಪ್ ಸ್ಪಷ್ಟನೆ ನೀಡಿದರು. "ನೆಪೋಟಿಸಂ ದೊಡ್ಡಮನೆಯಿಂದಲೇ ಶುರುವಾಯಿತಲ್ಲಾ, ಹಾಗಿದ್ದರೆ ರಾಜಕುಮಾರ್ ಅವರ ಮಕ್ಕಳನ್ನು ಕೇಳಬೇಕಿತ್ತಲ್ಲಾ? ನಿಮ್ಮ ಆಸ್ತಿಯೆಲ್ಲ ನಿಮ್ಮ ಮಕ್ಕಳಿಗೇ ಹೋಗುತ್ತಿದೆ, ಬೇರೆಯವರಿಗೂ ಕೊಡಿ ಅಂತ ಅಂಬಾನಿಯರನ್ನೂ ಕೇಳಬೇಕು. ಹೀಗೆ ಪ್ರತಿಯೊಬ್ಬರನ್ನೂ ಕೇಳಬೇಕು. ಮುಂಬೈನಲ್ಲಿ ಹುಟ್ಟಿಕೊಂಡ ಪದವನ್ನು ಇಲ್ಲಿ ಪ್ರಯೋಗಿಸುವುದು ತಪು$್ಪ. ಹಾಗೇನಾದರೂ ಕುಟುಂಬದವರಿಗೆ ಆ ಯೋಗ್ಯತೆ, ಅರ್ಹತೆ ಕಲೆ ಇದ್ದರೆ, ಕನ್ನಡಿಗರು ಅವರನ್ನು ಇಷ್ಟಪಟ್ಟರೆ, ಇದು ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇವತ್ತು ಶಿವರಾಜಕುಮಾರ್ ಮೇರು ನಟರು, ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ತುಂಬ ಜನ ಬೆಳೆದಿದ್ದೇವೆ. ಅಪು$್ಪ ಇವತ್ತು ನಮ್ಮ ಜತೆ ಇಲ್ಲದಿರಬಹುದು. ಆದರೆ, ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಎಷ್ಟೋ ಜನ ಚಿತ್ರರಂಗಕ್ಕೆ ಬಂದವರಿದ್ದಾರೆ. ನನ್ನ ಮನೆಯಲ್ಲಿ ಸಂಚಿತ್ ಹೊರತುಪಡಿಸಿ ನನ್ನ ಸಹೋದರ ಸಂಬಂಧಿಗಳು, ಅವರು ಮಕ್ಕಳು ಅಂತ ತುಂಬ ಜನ ಇದ್ದಾರೆ. ಆದರೆ, ಯಾರೂ ಚಿತ್ರರಂಗಕ್ಕೆ ಬಂದಿಲ್ಲ. ನನ್ನ ಮಗಳು ಸಾನ್ವಿ ಚೆನ್ನಾಗಿ ಹಾಡುತ್ತಾಳೆ, ಗಾಯಕಿಯಾಗಿದ್ದಾಳೆ. ಸಂಚಿತ್ಗೆ ನಟನೆ ಇಷ್ಟ, ನಟನಾಗಿದ್ದಾನೆ. ಕನ್ನಡ ಚಿತ್ರರಂಗಕ್ಕೆ ನೆಪೋಟಿಸಂ ಎಂಬ ಪದ ಸೂಟ್ ಆಗುವುದಿಲ್ಲ. ಇಲ್ಲಿನ ಜನರಿಗೆ ಗೊತ್ತಿರುವುದು ಒಂದೇ ಅದು ಕಲೆ. ಅದೊಂದಿದ್ದರೆ ಬೆಳೆಯುತ್ತಾರೆ' ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.
Quote - ನೆಪೋಟಿಸಂ ಎಂಬ ಪದದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ನನಗೆ ಗೊತ್ತಿದೆ. ಆದರೆ, ನಾನು "ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ, ನನ್ನನ್ನು ನಾನು ಪ್ರೂವ್ ಮಾಡಿಕೊಂಡಿದ್ದೇನೆ ಎಂಬ ಭರವಸೆಯಿದೆ. ಸಿನಿಮಾ ರಿಲೀಸ್ ಆದ ಬಳಿಕ ನನಗೆ ಸಿಗುತ್ತಿರುವ ಅಪಾರ ಪ್ರೀತಿಯ ನಡುವೆ ಆ ನೆಗೆಟಿವಿಟಿ ಎಲ್ಲೂ ಕಾಣಿಸುತ್ತಿಲ್ಲ.