Predicts Astrologer: ನಟಿ ಕತ್ರಿನಾ ಕೈಫ್ ಹಾಗೂ ವಿಕಿ ಕೌಶಲ್ ದಂಪತಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶುಭ ಸುದ್ಧಿಯನ್ನು ಹಂಚಿಕೊಂಡಿದ್ದು, ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ಇದರ ಬೆನ್ನಲ್ಲೇ, ಅನಿರುದ್ಧ್ ಮಿಶ್ರಾ ಎಂಬ ಜ್ಯೋತಿಷಿ ವಿಕಿ ಹಾಗೂ ಕತ್ರಿನಾ ಕೈಫ್ಗೆ ಹೆಣ್ಣು ಮಗು ಜನಿಸುತ್ತದೆ ಎಂದು ಭವಿಷ್ಯ ನುಡಿದು ಟ್ವೀಟ್ ಮಾಡಿದ್ದು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದಿಗೆ ಗ್ರಾಸವಾಗಿದೆ.
ಇದನ್ನೂ ಓದಿ: ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿ; ಭಾರತೀಯರಲ್ಲಿ ಹೆಚ್ಚುತ್ತಿದೆಯಂತೆ ವಿಟಮಿನ್ ಡಿ ಕೊರತೆ| Life style
ಅನಿರುದ್ಧ್ ಮಿಶ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಈ ಹಿಂದೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಹೆಣ್ಣು ಮಗುವಾಗುವುದು ಹಾಗೆಯೇ ಕರೀನಾ ದಂಪತಿಗೆ ಗಂಡು ಮಗು ಆಗುವುದು ಎಂದು ಭವಿಷ್ಯವಾಣಿ ನುಡಿದಿರುವ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ.
ಭವಿಷ್ಯವಾಣಿ ಗಮನಿಸಿದ ನೆಟ್ಟಿಗರಲ್ಲಿ ಒಬ್ಬ ಎಕ್ಸ್ ಬಳಕೆದಾರ ಈ ಭವಿಷ್ಯವಾಣಿ ಸರಿಯಾಗಿರಲು ಶೇ.50 ರಷ್ಟು ಅವಕಾಶ ಇರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಮತ್ತೊಬ್ಬ ಬಳಕೆದಾರ ಮೊದಲ ಮಗು ಅಂದರೆ ಮತ್ತೊಂದು ಮಗುವಾಗುವ ಸಾಧ್ಯತೆ ಇದಿಯಾ ಎಂದು ಟ್ವೀಟ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಸನ್ನಿ ಕೌಶಲ್ ಮಾತನಾಡಿದ್ದು, ಮಗುವಿನ ಆಗಮನಕ್ಕಾಗಿ ತುಂಬಾ ಉತ್ಸಾಹಕನಾಗಿದ್ದೇನೆ. ನಾವೆಲ್ಲರೂ ಈ ರೀತಿಯ ಸಂತೋಷವನ್ನು ಪಡೆಯುತ್ತಿರುವುದು ಇದೇ ಮೊದಲು. ಮಗು ಬರುವ ದಿನಕ್ಕಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದರು. (ಏಜೆನ್ಸೀಸ್)