ನ್ಯೂಸ್

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಟ ಕಮಲ್ ಹಾಸನ್| Kamal Haasan

ನವದೆಹಲಿ;ಹಿರಿಯ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಇಂದು (ಜು.25) ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಮುಂಜಾನೆ ಸಂಸತ್ ಸಂಕೀರ್ಣಕ್ಕೆ ಆಗಮಿಸಿದ ಹಾಸನ್, ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಟ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ, ಸಹ ಸಂಸದರು ಮೇಜಿನ ಮೇಲೆ ಚಪ್ಪಾಳೆ ತಟ್ಟಿದರು.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ನೆರವಿನೊಂದಿಗೆ ಕಳೆದ ಜೂನ್ ತಿಂಗಳಲ್ಲಿ ಕಮಲ್ ಹಾಸನ್ ಅವರು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.  ನಾನು ಪ್ರಮಾಣ ವಚನ ಸ್ವೀಕರಿಸಲಿದ್ದು, ನನ್ನ ಹೆಸರನ್ನು ನೋಂದಾಯಿಸಲಿದ್ದೇನೆ. ಓರ್ವ ಭಾರತೀಯನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅವರು ರಾಜ್ಯಸಭೆಗೆ ತಿಳಿಸಿದರು.

'ಥಗ್ ಲೈಫ್' ಚಿತ್ರದ ನಟ ತಮ್ಮ ಮಹತ್ವದ ರಾಜಕೀಯ ಮೈಲಿಗಲ್ಲಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಮಕ್ಕಳ್ ನೀಧಿ ಮಯ್ಯಮ್ (ಎಂಎನ್‌ಎಂ) ಸ್ಥಾಪಕ ಮತ್ತು ನಟ-ರಾಜಕಾರಣಿಯಾಗಿರುವ ಕಮಲ್​ ಹಾಸನ್​, ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ನನಗೆ ತುಂಬಾ ಹೆಮ್ಮೆ ಮತ್ತು ಗೌರವವಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

(ಏಜೆನ್ಸೀಸ್)