ನ್ಯೂಸ್

ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ಸ್ಟಾರ್​ ನಟ; ಹೇಗಿರಲಿದೆ ಥ್ರಿಲ್ಲರ್​ ಪನಿ

ತಿರುವಂತಪುರಂ: ಮಲಯಾಳಂ ನಟ ಜೋಜು ಜಾರ್ಜ್ ಸಿನಿಮಾ ಇಂಡಸ್ಟ್ರೀಗೆ ಚಿರಪರಿಚಿತರು. ಇಷ್ಟುದಿನಗಳ ಕಾಲ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ನಟ ಮೊದಲ ಬಾರಿಗೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಪನಿ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಪನಿ ಸಿನಿಮಾ ಕೇರಳದ ತ್ರಿಶೂರ್‌ನಲ್ಲಿ ಎರಡು ಗ್ಯಾಂಗ್‌ಗಳ ಮಧ್ಯೆ ನಡೆಯುವ ಪೈಪೋಟಿಯ ಕುರಿತಾಗಿರುವ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದೆ. ಚಿತ್ರದ ಮೋಶನ್​ ಪೋಸ್ಟರನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಚಿತ್ರವು 2024 ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ.

ಜೋಜು ಅವರೇ ಪನಿ ಚಿತ್ರಕಥೆಯನ್ನೂ ಬರೆದಿದ್ದು, ಹಿರಿಯ ಛಾಯಾಗ್ರಾಹಕ ವೇಣು ಛಾಯಾಗ್ರಹಣ ಮಾಡಿದ್ದಾರೆ. ಜೋಜು ಜಾರ್ಜ್ ಹಾಗೂ ಅಭಿನಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಸೀಮಾ, ಚಾಂದಿನಿ ಶ್ರೀಧರ್, ಪ್ರಶಾಂತ್ ಅಲೆಕ್ಸಾಂಡರ್, ಬಾಬು ನಂಬೂದಿರಿ ಮತ್ತು ಬಿಟ್ಟೋ ಡೇವಿಸ್ ಸೇರಿದಂತೆ ಮೋಲಿವುಡ್​​ನ ಹೆಸರಾಂತ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಪ್ಪು ಪಾತು ಪಪ್ಪು ಪ್ರೊಡಕ್ಷನ್ಸ್ ಮತ್ತು ಎಡಿಎಸ್ ಸ್ಟುಡಿಯೋಸ್​ನಿಂದ ನಿರ್ಮಾಣಗೊಂಡಿದ್ದು, ವಿಷ್ಣು ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.