ನ್ಯೂಸ್

ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಬೆ0ಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಬುಧವಾರ ಮತ್ತೆ ನಿರಾಸೆಯಾಗಿದೆ. ನ್ಯಾಯಾಲಯವು ರೇಣುಕಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಆ.೨೮ರ ವರೆಗೆ ಮುಂದೂಡಿದೆ.
ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಏಕೆ ಮುಂದುವರಿಸಬೇಕು ಎಂದು ಪೊಲೀಸರು ಕೆಲವು ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಆ ಕಾರಣಗಳನ್ನು ಪರಿಗಣಿಸಿ ನ್ಯಾಯಾಧೀಶರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದ್ದಾರೆ.
ಸೆಪ್ಟೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದ್ದು, ಚಾರ್ಜ್‌ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.
ಪೊಲೀಸರು ನೀಡಿದ ಕಾರಣಗಳೇನು?
*ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದು ಎ್ಎಸ್‌ಎಲ್ ವರದಿಯಲ್ಲಿ ಬಹುತೇಕ ದೃಢವಾಗಿದೆ. ಈಗಾಗಲೇ ಕೆಲವು ಎಫ್‌ಎಸ್‌ಎಲ್ ವರದಿಗಳು ಬಂದಿವೆ. ಇನ್ನೂ ಕೆಲವು ವರದಿಗಳು ಬರಬೇಕಿವೆ.
*ಪ್ರಕರಣ ಸಂಬಂಧ ಇನ್ನೂ ಹಲವರ ವಿಚಾರಣೆ ಬಾಕಿ ಇದೆ, ಸೆಕ್ಷನ್ ೧೬೪ ರ ಅಡಿಯಲ್ಲಿ ಕೆಲವು ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ.

  • ಆರೋಪಿಗಳು ಪ್ರಭಾವಿಗಳಾಗಿದ್ದು ಮೃತ ರೇಣುಕಸ್ವಾಮಿಯ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆವೊಡ್ಡುವ ಸಾಧ್ಯತೆ ಇದೆ.
    *ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳನ್ನು ಸಿಎ್ಎಸ್‌ಗೆ ಪರೀಕ್ಷೆಗೆಂದು ಕಳಿಸಿದ್ದು ಅವುಗಳ ವರದಿ ಬರುವುದು ಬಾಕಿ ಇದೆ.
  • ಪವಿತ್ರ, ದರ್ಶನ್‌ನಿಂದ ೧೭ ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿ ಆಗಿರುವುದು ಮೇಲ್ನೋಟಕ್ಕೆ ತಿಳಿದಿದೆ. ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ ಆಗಿದೆ.
    *ಕೊಲೆಯಲ್ಲಿ ಪ್ರತಿ ಆರೋಪಿಯ ಪಾತ್ರದದ ಬಗ್ಗೆ ತಿಳಿಯಬೇಕಿದೆ. ಕೃತ್ಯದಲ್ಲಿ ಪ್ರತಿಯೊಬ್ಬರು ವಹಿಸಿದ್ದ ಪಾತ್ರ, ಉದ್ದೇಶಗಳ ಬಗ್ಗೆ ಗೊತ್ತಾಗಬೇಕಿದೆ.
  • ಆರೋಪಿಗಳಿಗೆ ಹಣಬಲ ಇದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದರೆ ತೊಂದರೆ ಆಗುವ ಸಾಧ್ಯತೆ ಇದೆ. ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ.