ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ೫೭ನೇ ಸಿಸಿಎಚ್ ಕೋರ್ಟ್‌ನಲ್ಲಿ ಮಂಗಳವಾರ ನಡೆಯಲಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಎರಡು ದಿನಗಳ ಕಾಲ ಸುದೀರ್ಘವಾದ ವಾದ ಮಂಡಿಸಿದ್ದರು. ಅವರ ವಾದ ಬಹುತೇಕ ಮುಕ್ತಾಯವಾಗಿದ್ದು ಮಂಗಳವಾರ ವಿಚಾರಣೆ ಆರಂಭವಾಗುತ್ತಿದಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ. ಸಿ.ವಿ.ನಾಗೇಶ್ ಅವರ ಪ್ರಬಲವಾದ ವಾದದಿಂದ ದರ್ಶನ್‌ಗೆ ಜಾಮೀನಿನ ಮೇಲೆ ನಿರೀಕ್ಷೆಯನ್ನು ಹೆಚ್ಚಾಗುವಂತೆ ಮಾಡಿದೆ.
ಜಾಮೀನು ಅರ್ಜಿ ಹಿಂಪಡೆದ ವಕೀಲರು:
ರೇಣುಕಸ್ವಾಮಿ ಕೊಲೆ ಪ್ರಕರಣದ ಸಂಬಂಧ ಸಲ್ಲಿಸಲಾಗಿದ್ದ ಇಬ್ಬರು ಆರೋಪಿಗಳ ಅರ್ಜಿಯನ್ನು ಹಿಂಪಡಿಯಲಾಗಿದೆ. ಆರೋಪಿಗಳಾದ ಪವನ್ ಹಾಗೂ ರಾಘವೇಂದ್ರ ಅವರ ಜಾಮೀನು ಅರ್ಜಿಯನ್ನು ವಕೀಲರು ಹಿಂಪಡೆದಿದ್ದಾರೆ. ಅರ್ಜಿ ಹಿಂಪಡೆಯುತ್ತಿರುವುದಾಗಿ ಕೋರ್ಟ್‌ಗೆ ಮೆಮೋ
ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಅರ್ಜಿ ಹಿಂಪಡೆಯಲು ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.