Actor Darshan: ಕೆಲವು ತಿಂಗಳುಗಳ ಹಿಂದೆಯಷ್ಟೇ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿರುವ ಆರೋಪಿ ದರ್ಶನ್, ಇದೀಗ ತಮ್ಮ ಬಾಕಿ ಉಳಿದಿರುವ ಚಿತ್ರಗಳ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ ದರ್ಶನ್ಗೆ ಮತ್ತೊಂದು ತಲೆಬಿಸಿ ಎದುರಾಗಿದ್ದು, ತಮ್ಮ ಒಡೆತನದಲ್ಲಿರುವ ಫಾರ್ಮ್ಹೌಸ್ಗೆ ಸಂಬಂಧಿಸಿದಂತೆ ಟಿ.ನರಸೀಪುರ ಕೋರ್ಟ್ನಿಂದ ಸಮನ್ಸ್ ಜಾರಿಯಾಗಿದೆ.
ಇದನ್ನೂ ಓದಿ: ಈ ವಾರ ಒಟಿಟಿಯಲ್ಲಿ ತೆರೆಕಂಡ 5 ತೆಲುಗು ಸಿನಿಮಾಗಳಿವು; ಯಾವ ಚಿತ್ರಗಳು ರಿಲೀಸ್? ಇಲ್ಲಿದೆ ಪಟ್ಟಿ | Telugu Films
ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಮನ್ಸ್ ಜಾರಿಯಾಗಿದ್ದು, ತಮ್ಮ ಮೈಸೂರು ಫಾರ್ಮ್ಹೌಸ್ನಲ್ಲಿ ಸಾಕಿದ್ದ ವಿದೇಶಿ ಬಾತುಕೋಳಿ ವಿಚಾರಕ್ಕೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಈಗ ಅದಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
ಈ ಹಿಂದೆ ದರ್ಶನ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದ ಅರಣ್ಯಾಧಿಕಾರಿಗಳು, ಬಾರ್ ಹೆಡೆಡ್ ಗೂಸ್ ಎಂಬ ವಿದೇಶಿ ಪ್ರಭೇದದ ಬಾತುಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದ ವಿಚಾರಣೆ ಮೈಸೂರು ಜಿಲ್ಲೆಗೆ ಸೇರುವ ಟಿ.ನರಸೀಪುರ ಕೋರ್ಟ್ನಲ್ಲಿ ನಡೆಯುತ್ತಿದೆ. ಪ್ರಸ್ತುತ ಇದರ ವಿಚಾರಣೆಯ ಸಲುವಾಗಿ ಇದೀಗ ನ್ಯಾಯಾಲಯ ದರ್ಶನ್ ಮತ್ತು ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ ಮಾಡಿದ್ದು, ಜುಲೈ 4ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.