ಬೆಂಗಳೂರು: ಇಂದು ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಕನ್ನಡ ಚಿತ್ರನಟ, ಆರೋಪಿ ದರ್ಶನ್ (Actor Darshan Bail) ಜಾಮೀನು ಅರ್ಜಿ ನಡೆಸಿದ ಹೈಕೋರ್ಟ್, ಇದೀಗ ಮಧ್ಯಂತರ ಜಾಮೀನು ಆದೇಶವನ್ನು ನಾಳೆಗೆ (ಅ.30) ಕಾಯ್ದಿರಿಸಿದೆ.
ಇದನ್ನೂ ಓದಿ: ದೀಪಾವಳಿಗೆ ದಿವ್ಯತೆಯ ಆನಂದದ ಅನುಭವ
ದರ್ಶನ್ ಪರ ವಾದ ಮಂಡಿಸಿದ ವಕೀಲ ಸಿ.ವಿ. ನಾಗೇಶ್, ನಮ್ಮ ಕಕ್ಷಿದಾರರಿಗೆ ಎಲ್5, ಎ1 ನಡುವೆ ಡಿಸ್ಕ್ ಊದಿಕೊಂಡಿದೆ. ಇದರಿಂದ ಮುಂದೆ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಹೀಗಾಗಿ ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಇಲ್ಲಿ ನಾವು ಕೇಳುತ್ತಿರುವುದು ಕೇವಲ ಮಧ್ಯಂತರ ಜಾಮೀನು ಅಷ್ಟೇ. ಹೀಗಾಗಿ ಕೋರ್ಟ್ ನಮ್ಮ ಮನವಿಯನ್ನು ಪರಿಗಣಿಸಿ, ಜಾಮೀನು ನೀಡಬೇಕು ಎಂದು ವಾದಿಸಿದರು.
ದರ್ಶನ್ ಪರ ವಕೀಲ ನಾಗೇಶ್ ಮತ್ತು ಎಸ್ಪಿಪಿ ಪ್ರಸನ್ನಕುಮಾರ್ ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟ್, ಅಂತಿಮವಾಗಿ ಎ2 ಆರೋಪಿ ದರ್ಶನ್ ಮಧ್ಯಂತರ ಜಾಮೀನು ಅ.30ಕ್ಕೆ ಕಾಯ್ದಿರಿಸಿದೆ.