ನ್ಯೂಸ್

ರೇಣುಕಸ್ವಾಮಿ ಕೊಲೆ ಕೇಸ್​: ಆರೋಪಿ ದರ್ಶನ್​ ಜಾಮೀನು ಅರ್ಜಿ ಅ.29ಕ್ಕೆ ಮುಂದೂಡಿದ ಹೈಕೋರ್ಟ್​​ | Actor Darshan

ಮೋಹನ್​ ಶೆಟ್ಟಿ

ಬೆಂಗಳೂರು: ಇಂದು ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಕನ್ನಡ ಚಿತ್ರನಟ, ಆರೋಪಿ ದರ್ಶನ್ (Actor Darshan)​ ಜಾಮೀನು ಅರ್ಜಿ ನಡೆಸಿದ ಹೈಕೋರ್ಟ್​, ಇದೀಗ ಮತ್ತೊಮ್ಮೆ ಬೇಲ್​ ಭವಿಷ್ಯವನ್ನು ಅ.29ಕ್ಕೆ ಮುಂದೂಡಿದೆ.

ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ದರ್ಶನ್​ ಪರ ವಕೀಲ ಸಿ.ವಿ. ನಾಗೇಶ್​ ಅವರು ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟ್​, ಜಾಮೀನು ಅರ್ಜಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಸಿದ ಕೋರ್ಟ್​, ಮತ್ತೆ ಬೇಲ್ ಭವಿಷ್ಯವನ್ನು ನಾಳೆಗೆ ಮುಂದೂಡಿಕೆ ಮಾಡಿದೆ.

ಸಿಟಿ ಸಿವಿಲ್​ ಕೋರ್ಟ್​ನಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್​ ಜಾಮೀನು ಅರ್ಜಿ ವಜಾಗೊಂಡಿತ್ತು. ಕೋರ್ಟ್​ ತೀರ್ಪಿನಿಂದ ಕಂಗಾಲಾದ ದರ್ಶನ್​, ಇದೀಗ ಹೈಕೋರ್ಟ್​ನಲ್ಲಿ ತಮ್ಮ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಿಂದ ದರ್ಶನ್​ಗೆ ಮುಕ್ತಿ ಸಿಗಲಿದೆಯಾ? ನ್ಯಾಯಾಲಯ ಕೊಡುವ ತೀರ್ಪು ಏನು ಎಂಬುದನ್ನು ಸದ್ಯ ಕಾದು ನೋಡಬೇಕಿದೆ.