ನ್ಯೂಸ್

VIDEO | 'ದರ್ಶನ್​ ಸಿನಿಮಾ ಅಂದ್ರೆ ನಿರೀಕ್ಷೆ ಇರುತ್ತೆ, ಆದ್ರೆ'….: ನಟ ಅವಿನಾಶ್

ಮೋಹನ್​ ಶೆಟ್ಟಿ

ಬೆಂಗಳೂರು: ತರುಣ್​ ಸುಧೀರ್​ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ 'ಕಾಟೇರ' ಸಿನಿಮಾ ಇದೇ ಡಿ. 29 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಮಧ್ಯೆ ಚಿತ್ರದ ರಿಲೀಸ್ ಕುರಿತಂತೆ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ ಹಲವಾರು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದೆ.

ಸಿನಿಮಾದ ಬಗ್ಗೆ ಮಾತನಾಡಿದ ಹಿರಿಯ ನಟ ಅವಿನಾಶ್​, "ರಾಕ್​ಲೈನ್​ ವೆಂಕಟೇಶ್​, ದರ್ಶನ್​, ತರುಣ್​ ಅವರ ಜತೆಯಲ್ಲಿ ಹಲವಾರು ಚಿತ್ರಗಳನ್ನು ಮಾಡಿದ್ದೇನೆ. ತರುಣ್ ಅವರ ಮೂರನೇ ಫಿಲಂ, ಅದರಲ್ಲೂ ನಾನು ಇದ್ದೀನಿ. ಆದ್ರೆ, 'ಕಾಟೇರ' ಮಾಡಿದಾಗ ನನಗೆ ಈ ಹಿಂದೆ ಅನೇಕ ಚಿತ್ರಗಳನ್ನು ಮಾಡಿದ್ರು ಸಹ ಈ ಚಿತ್ರ ಹೊಸ ಅನುಭವ ಅಂತ ಅನಿಸಿತು" ಎಂದು ಹೇಳಿದರು.

"ಆ ಭಾವನೆ ಬಂದಾಗ ಸಿನಿಮಾದ ಬಗ್ಗೆ ಒಂದು ಗಟ್​ ಫೀಲಿಂಗ್ ಅಂತ ಹೇಳ್ತಾರೆ, ಅದು ನನಗೆ ಬಂತು. ಯಾಕಂದ್ರೆ ದರ್ಶನ್ ಅವರ ಸಿನಿಮಾ ಅಂದ್ರೆ ಅಪಾರವಾದ ನಿರೀಕ್ಷೆಗಳು ಇದ್ದೇ ಇರುತ್ತದೆ. ನನ್ನ ಪ್ರಕಾರ ಈ ಚಿತ್ರ"........ಮತ್ತಷ್ಟು ವಿಚಾರ ತಿಳಿಯಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.