ನ್ಯೂಸ್

ಸಲಾರ್- 2 ನಲ್ಲಿ ಪ್ರಭಾಸ್‌ ಬದಲಿಗೆ ಈ ಯುವ ನಟ ನಾಯಕ?

ಹೈದರಾಬಾದ್​: ಬಾಹುಬಲಿ ನಂತರ ಸತತ ಸೋಲು ಕಂಡಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ʼಸಲಾರ್‌ʼನೊಂದಿಗೆ ಕಮ್‌ಬ್ಯಾಕ್‌ ಆಗಿದ್ದಾರೆ. ಸಲಾರ್‌ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡಿದೆ. ಅಲ್ಲದೆ, ಮಂಗಳವಾರ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು.. ಇದರ ಬೆನ್ನಲ್ಲೆ, ಸಲಾರ್‌ ಭಾಗ 2ಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ ಅಭಿನಯದ ಪ್ರಶಾಂತ್‌ ನೀಲ್‌ ನಿರ್ದೇಶನದ ʼಸಾಲಾರ್ʼ ಚಿತ್ರ ಬ್ಲಾಕ್ ಬಸ್ಟರ್ ಹಿಟ್‌ ಆಗಿದೆ. ಅಲ್ಲದೆ, ಜನವರಿ 16 ರಂದು ಚಿತ್ರತಂಡ ಸಕ್ಸಸ್ ಪಾರ್ಟಿ ಸಹ ಆಚರಿಸಿತು. ಇದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್, ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತಿತರರು ಹಾಜರಿದ್ದರು.

ಇನ್ನು ಸಂಭ್ರಮಾಚರಣೆಯಲ್ಲಿ ಟಾಲಿವುಡ್‌ ನಟ ಅಖಿಲ್ ಅಕ್ಕಿನೇನಿ ಕಾಣಿಸಿಕೊಂಡಿರುವುದು ಹೊಸ ವದಂತಿ ಹುಟ್ಟಿಕೊಳ್ಳಲು ಕಾರಣವಾಗಿದೆ. ಸಲಾರ್ ಭಾಗ 2 ನಲ್ಲಿ ಅಖಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅನೇಕರನ್ನು ಅಚ್ಚರಿಗೊಳಿಸಿದೆ.

ನಟ ಅಖಿಲ್ ʼಸಲಾರ್ʼ ಸೀಕ್ವೆಲ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಇನ್ನು ಕೆಲವರು ದೇವಾ ಅವರ ಚಿಕ್ಕಣ್ಣನ ಪಾತ್ರದಲ್ಲಿ ಅಖಿಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಸುದ್ದಿ ಎಂದು ಸಲಾರ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ಮಾಹಿತಿ ನೀಡಿದ್ದಾರೆ. ಇತರ ಅತಿಥಿಗಳಂತೆ ಅಖಿಲ್ ಅವರನ್ನೂ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ಸಲಾರ್‌ನ ಒಟಿಟಿ ಬಿಡುಗಡೆಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಈ ಚಿತ್ರ ಒಟಿಟಿಗೆ ಬರುವ ಸಾಧ್ಯತೆಗಳಿವೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಪ್ರಭಾಸ್ ಈ ವರ್ಷ ಕಲ್ಕಿ 2898 ಎಟಿ ಮತ್ತು ರಾಜಾಸಾಬ್ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ.