ನ್ಯೂಸ್

ಇದ್ದಕ್ಕಿದ್ದ ಹಾಗೆ ಅಪೋಲೋ ಆಸ್ಪತ್ರೆಗೆ ದಾಖಲಾದ ನಟ ಅಜಿತ್​; ಕಾರಣ ಏನಿರಬಹುದು| Ajith

ಮಂಗಳವಾರ (ಏ.29) ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಪಾರ ಜನ ಸಮೂಹ ಸೇರಿದ್ದರಿಂದ ಅಜಿತ್ ಅವರ ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.

Film: ಕಾಲಿವುಡ್ ನಟ ಅಜಿತ್ ಇದ್ದಕ್ಕಿದ್ದ ಹಾಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಅವರು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಗೌರವವನ್ನು ಸ್ವೀಕರಿಸಿದ ನಂತರ ಅವರು ನವದೆಹಲಿಯಿಂದ ವಾಪಸ್ಸಾಗಿದ್ದರು.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರಿ ಜನಸಮೂಹದಿಂದ ಅಜಿತ್ ಕುಮಾರ್ ಅವರ ಕಾಲಿಗೆ ಸಣ್ಣ ಗಾಯವಾಯಿತು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು, ಅವರು ಇಂದು ಸಂಜೆ ಡಿಸ್ಟಾರ್ಜ್ ಆಗುವ ಸಾಧ್ಯತೆಯಿದೆ. ಅವರ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

(ಏಜೆನ್ಸೀಸ್)

ಅಧಿಕ್ ರವಿಚಂದ್ರನ್ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ' ತಮಿಳು ಚಿತ್ರದಲ್ಲಿ ಇತ್ತೀಚೆಗೆ ಅಜಿತ್ ಕಾಣಿಸಿಕೊಂಡಿದ್ದಾರೆ.

ಕಾರು ರೇಸಿಂಗ್‌ನಲ್ಲಿ ಭಾಗಿಯಾಗುತ್ತಿರುವ ಅಜಿತ್, ಈ ವರ್ಷ ಹೆಚ್ಚಿನ ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಯುರೋಪ್‌ಗೆ ತೆರಳುವ ನಿರೀಕ್ಷೆಯಿದೆ.