ನ್ಯೂಸ್

ರೇಸಿಂಗ್ ವೇಳೆ ನಟ ಅಜಿತ್ ಕುಮಾರ್​ ಕಾರು ಅಪಘಾತ; ಸತತ 3ನೇ ಬಾರಿಗೆ ತಪ್ಪಿದ ದುರಂತ| racing

ಇಟಲಿ; ಸಿನಿಮಾ ಹೊರತುಪಡಿಸಿ ಕಾರು ರೇಸಿಂಗ್‌ನಲ್ಲಿ ತೀವ್ರ ಆಸಕ್ತಿ ಹೊಂದಿರುವ ನಟ ಅಜಿತ್, ಕಳೆದ ಕೆಲವು ವರ್ಷಗಳಿಂದ ಅಂತರರಾಷ್ಟ್ರೀಯ ಕಾರು ರೇಸ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಒಂದು ಹಂತದಲ್ಲಿ ಕಾರು ರೇಸಿಂಗ್‌ನಿಂದ ವಿರಾಮ ತೆಗೆದುಕೊಂಡರೂ ಕಳೆದ ಜನವರಿಯಿಂದ 'ಅಜಿತ್ ಕುಮಾರ್ ರೇಸಿಂಗ್' ತಂಡದ ಮೂಲಕ ಮತ್ತೆ ವಿವಿಧ ದೇಶಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಆದರೆ ಅಜಿತ್ ಕಾರು ಒಂದಲ್ಲ ಒಂದು ಕಾರಣಗಳಿಂದ ಅಪಘಾತಕ್ಕೀಡಾಗುತ್ತಿದೆ. ಇದೀಗ ಮೂರನೇ ಬಾರಿ ಇಟಲಿಯಲ್ಲಿ ನಡೆಯುತ್ತಿರುವ ಕಾರು ರೇಸಿಂಗ್‌ನಲ್ಲಿ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಸದ್ಯ ಅದೃಷ್ಠವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನಲ್ಲಿ ಅಜಿತ್ ಕುಮಾರ್ ಅವರ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಆ ಅಪಘಾತದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಅಜಿತ್ ತಾಳ್ಮೆಗೆ ಪ್ರೇಕ್ಷಕರ ಮೆಚ್ಚುಗೆ

(ಏಜೆನ್ಸೀಸ್)

ಇನ್ನೂ ಈ ಅಪಘಾತದ ನಂತರ ನಟ ಅಜಿತ್​ಕುಮಾರ್​ ವರ್ತಿಸಿದ ಶಾಂತಿ ಮತ್ತು ತಾಳ್ಮೆಗೆ ಪ್ರೇಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಪಘಾತದ ನಂತರ ಸ್ಥಳದಲ್ಲಿ ಅಜಿತ್ ತನ್ನ ಕಾರಿನ ಹಾನಿಗೊಳಗಾದ ಭಾಗಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ದುಬೈ ಮತ್ತು ಸ್ಪೇನ್‌ನಲ್ಲಿ ಇಲ್ಲಿಯವರೆಗೆ ನಡೆದ ಕೆಲವು ಸ್ಪರ್ಧೆಗಳಲ್ಲಿ ಅವರು ಅಪಘಾತಕ್ಕೀಡಾಗಿದ್ದಾರೆ ಎಂಬುದು ಗಮನಾರ್ಹ. ಇದೆಲ್ಲದರ ಹೊರತಾಗಿಯೂ, ಅವರು ಪ್ರಸ್ತುತ ತಮ್ಮ ಕಾರು ರೇಸಿಂಗ್ ಉತ್ಸಾಹವನ್ನು ಮುಂದುವರೆಸಿದ್ದಾರೆ. ಇದು ನಟನಿಗೆ ತನ್ನ ಕಾರು ಮತ್ತು ರೇಸಿಂಗ್ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದಿದ್ದಾರೆ.