ನ್ಯೂಸ್

ನೀರಿನ ಟಕ ದುರಸ್ತಿಗೆ ಕ್ರಮ

ಶಿಡ್ಲಟ್ಟ: ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಯಾವುದೇ ಶುದ್ಧ ನೀರಿನ ಟಕ ಕೆಟ್ಟು ನಿಲ್ಲುವಂತಾಗಬಾರದು. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವ ವಾತಾವರಣ ನಿರ್ಮಾಣವಾಗದಂತೆ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಮನಹರಿಸಬೇಕು ಎಂದು ತಾಪಂ ಇಒ ಹೇಮಾವತಿ ಹೇಳಿದರು.

ತಾಲೂಕಿನ ತಲಕಾಯಲಬೆಟ್ಟ ಗ್ರಾಪಂ ತಲಕಾಯಲಬೆಟ್ಟ ಮತ್ತು ಟಿ.ವೆಂಕಟಾಪುರ ಗ್ರಾಮದ ಶುದ್ಧ ಕುಡಿಯುವ ನೀರಿನ ಟಕಗಳ ಬಗ್ಗೆ ನಾಗರಿಕರಿಂದ ಬಂದಿದ್ದ ದೂರಿನ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ನಗರದ ನಾಗರಿಕರಂತೆ ಗ್ರಾಮೀಣ ಜನರೂ ಕೂಡಾ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಕುಡಿಯಲೆಂದು ಸರ್ಕಾರ ನೂರಾರು ಕೋಟಿ ವೆಚ್ಚ ಮಾಡಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಟಕ ನಿರ್ಮಿಸಿದೆ. ಅವುಗಳನ್ನು ಸರಿಪಡಿಸುವ ಕೆಲಸ, ಅವುಗಳ ನಿರ್ವಹಣೆ ಜವಾಬ್ದಾರಿ ಹೊತ್ತ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿ ಸ್ಥಳಿಯ ಮಟ್ಟದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯುವಂತಾಗಬೇಕು ಎಂದರು.

ಕಂದಾಯ ವಸೂಲಾತಿಯ ಬಗ್ಗೆ ಮಾಹಿತಿ ಹಾಗೂ ಅಡ್​ ಹ್ಯಾಕ್​ ಆೇಪಣೆಗಳ ಬಗ್ಗೆ ಗಮನ ಹರಿಸಿ, ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.