ನ್ಯೂಸ್

ಮೂಲ ಸೌಕರ್ಯ ಒದಗಿಸಲು ಕ್ರಮ

ಪ್ರಸಿನ್ ಕೆ.ಆರ್

ಕೆ.ಆರ್.ನಗರ: ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಡಯಾಲಿಸಿಸ್ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವರರು ಹೆಚ್ಚಾಗಿದ್ದು, ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 6 ಮತ್ತು ಸಾಲಿಗ್ರಾಮ ಆಸ್ಪತ್ರೆಯಲ್ಲಿ 2 ಡಯಾಲಿಸಿಸ್ ಮಿಷನ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೆ.ಆರ್.ನಗರ, ಸಾಲಿಗ್ರಾಮ, ಬೇರ್ಯ ಸೇರಿದಂತೆ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುವುದು. ಈ ಸಂಬಂಧ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಹಲವೆಡೆ ವೈದ್ಯರ ಕೊರತೆ ಇದ್ದು, ವೈದ್ಯರ ನೇಮಕಕ್ಕೆ ಕ್ರಮವಹಿಸಲಾಗುತ್ತದೆ.

ಇತ್ತೀಚೆಗೆ ಡೆಂೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಿ.ಜೆ.ನವೀನ್‌ಕುಮಾರ್, ಟಿಎಚ್‌ಒ ಡಾ.ಡಿ.ನಟರಾಜ್, ವೈದ್ಯ ಡಾ.ಶಿವಶಂಕರ್, ಡಾ.ಶಿವಮಲ್ಲೇಶ್, ಡಾ.ದರ್ಶನ್, ಡಾ.ಭವಾನಿ, ಕಿಶೋರ್, ಡಾ.ಶಾಂತಕುಮಾರ್, ಡಾ.ಗೌತಮ್, ಡಾ.ತೇಜಮಣಿ, ಪುರಸಭಾ ಸದಸ್ಯ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ನಟರಾಜ್, ಶಿವುನಾಯಕ್, ಶಂಕರ್‌ಸ್ವಾಮಿ, ಆರೋಗ್ಯ ರಕ್ಷ ಕಮಿಟಿ ಸದಸ್ಯ ಲೋಕೇಶ್, ಎಚ್.ಎಚ್.ನಾಗೇಂದ್ರ, ಕೆಂಚಿಮಂಜು, ಮುಖಂಡ ಚಂದ್ರು, ಶ್ರೀನಿವಾಸ್, ಜಾಬೀರ್ ಇತರರು ಇದ್ದರು.