ಹವಾಮಾನ ಬದಲಾವಣೆಯ ವರದಿಯಲ್ಲಿನ ಕಾರ್ಯ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡಂತೆ ವಿಶೇಷ ಕಾರ್ಯಾಗಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. 
ನ್ಯೂಸ್

ಹವಾಮಾನ ಬದಲಾವಣೆಯ ಕುರಿತು ಕ್ರಿಯಾ ಯೋಜನೆ ತರಬೇತಿ

Shravan Kumar Nala
ಮಂಗಳೂರು: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪಿ)ಯು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಹವಾಮಾನ ಬದಲಾವಣೆಯ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆಯನ್ನು ತಯಾರಿಸಿ 2024 ರಲ್ಲಿ ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲದಿಂದ ಅನುಮೋದನೆಗೊಂಡಿದೆ.
ಹವಾಮಾನ ಬದಲಾವಣೆಯ ವರದಿಯಲ್ಲಿನ ಕಾರ್ಯ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ವಿವಿಧ ಇಲಾಖೆಗಳು ಪ್ರಮುಖ ಸಂಸ್ಥೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸದರಿ ವಿಷಯವನ್ನು ವಿಸ್ತ್ರತಗೊಳಿಸಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡಂತೆ ಹಲವು ಕ್ಷೇತ್ರಗಳ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ಪಾಲದಾರರುಗಳ ಪ್ರತಿನಿಧಿಗಳಿಗೆ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದಕ್ಷಿಣ ಕನ್ನಡ ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ತರಬೇತಿ ಉದ್ಘಾಟಿಸಿ ಮಾತನಾಡಿ, ಪರಿಸರದ ಒಂದು ಅಂಗವಾದ ಮನುಷ್ಯ ಪರಿಸರದ ದುರ್ಬಳಕೆಯನ್ನು ತ್ಯಾಜ್ಯವನ್ನು ಬಿಟ್ಟು ಹೋಗುತ್ತಾ ಹವಾಮಾನ ಬದಲಾವಣೆಗೆ ಕಾರಣ ಆಗುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಇಲಾಖೆಗಳು ಅಲ್ಲದೆ ಜನಸಾಮಾನ್ಯರು ಹೇಗೆ ಬದಲಾವಣೆ ತರಬಹುದು, ಪರಿಸರದ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂರು.
ಡಾ.ಶೃತಿ ಬಿ.ವಿ ಅವರು ಹವಾಮಾನ ಬದಲಾವಣೆ ಕುರಿತು ಕರ್ನಾಟಕ ಕ್ರಿಯಾ ಯೋಜನೆ ಬಗ್ಗೆ ವಿವರಣೆ ನೀಡಿದರು. ಕಾರ್ಯ ನೀತಿ, ಕಾರ್ಯತಂತ್ರಗಳು ಮತ್ತು ವಿವಿಧ ಇಲಾಖೆಗಳ, ಸಂಘ ಸಂಸ್ಥೆಗಳ ಕರ್ತವ್ಯವನ್ನು ವಿವರಿಸಿದರು ಹಾಗೂ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಮತ್ತು ದ.ಕ ಜಿಲ್ಲೆಯಲ್ಲಿನ ಅವುಗಳ ದತ್ತಾಂಶಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಡಾ. ಸೋಮಶೇಖರ್ ರಾವ್ ಹವಾಮಾನ ಕ್ರಿಯಾ ಯೋಜನೆಯ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸುಷ್ಮಾ, ಜಿಲ್ಲಾ ಪಂಚಾಯಿತಿ ಯೋಜನಾ ಸಂಯೋಜಕ ಕಿರಣ್ ಮತ್ತಿತರರು ಇದ್ದರು.