ನ್ಯೂಸ್

ದೇವಸ್ಥಾನ ಹಣ ಲೂಟಿ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಣೆಬೆನ್ನೂರ: ರಾಜ್ಯದ ಹಿಂದು ಧಾಮಿರ್ಕ ದತ್ತಿ ಇಲಾಖೆ ಕೆಲ ಅಧಿಕಾರಿಗಳು ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಂತರ ರೂ. ಹಣವನ್ನು ಬೇಕಾಬಿಟ್ಟಿಯಾಗಿ ಲೂಟಿ ಮಾಡುತ್ತಿದ್ದು ಕೂಡಲೇ ಅಂಥವರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿಯ ಕರ್ನಾಟಕ ಮಂದಿರ ಮಹಾ ಸಂದ ಸದಸ್ಯರು ಸೋಮವಾರ ಗ್ರೇಡ್​&2 ತಹಸೀಲ್ದಾರ್​ ಅರುಣ ಕಾರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕಂದಾಯ ನಿರೀಕ್ಷಕರು 2023ರಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ 60 ಲಕ್ಷ ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಲೂಟಿ ಮಾಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರುನಲ್ಲಿ 1.87 ಕೋಟಿ ರೂ. ಲೂಟಿಯಾಗಿದೆ. ಇಂತಹ ಹಲವು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ.

ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಧಾಮಿರ್ಕ ದತ್ತಿ ನಿಧಿಗಳ ರ್ದುಬಳಕೆ ತಡೆಯಲು ಕಠಿಣ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು. ಹಿಂದು ಧಾಮಿರ್ಕ ದತ್ತಿ ಇಲಾಖೆಯ ಹಣ ದೇವಸ್ಥಾನ ಅಭಿವೃದ್ಧಿ, ಧರ್ಮಪ್ರಸಾರ ಹಾಗೂ ಮೂಲ ಸೌಕರ್ಯಗಳಿಗಾಗಿ ಮಾತ್ರ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಕೃಷ್ಣಾಸಾ ಪವಾರ, ನಾಗರಾಜ ಬದ್ದಿ, ಅನಿಲ ರಾಜೋಳಿ, ಸಂಜೀವ ಕೊಪ್ಪದ, ಮಲ್ಲಿಕಾರ್ಜುನ ತೆಗ್ಗಿನ, ಮಂಜುನಾಥ ಬದ್ನಿಕಾಯಿ, ವೆಂಕಟೇಶ ಮಿಸ್ಕಿನ, ಶಿವಕುಮಾರ ಹೀರೆಮಠ, ಚಂದ್ರಗೌಡ ಭರಮಗೌಡರ, ರಾಜೇಂದ್ರಕುಮಾರ ತಿಳವಳ್ಳಿ, ವಿಜಯಕುಮಾರ ಇಟಗಿ, ಪ್ರವಿಣ ಯಾದವಾಡ, ಅಶೋಕ ಭೋಜ ಮತ್ತಿತರರು ಇದ್ದರು.