ಹೈದರಾಬಾದ್: ಬಹಿಷ್ಕರಣ ವೆಬ್ ಸರಣಿಯಲ್ಲಿ ನಟಿ ಅಂಜಲಿ ವೇಶ್ಯೆ ಪಾತ್ರ ಮಾಡಿದ್ದು, ವಿಮರ್ಶಕರಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಈ ಸರಣಿಯಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಆಕೆ ಮಾತನಾಡಿದ್ದು, ತುಂಬಾ ಭಾವುಕ ಮಾತುಗಳನ್ನಾಡಿದ್ದಾಳೆ.
ಅಂಜಲಿ ನಟಿಸಿರುವ ಬಹಿಷ್ಕರಣ ವೆಬ್ ಸರಣಿಯು ಈ ತಿಂಗಳ 19 ರಿಂದ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ ಜೀ 5 ರಲ್ಲಿ ಸ್ಟ್ರೀಮ್ ಆಗುತ್ತಿದೆ. ಇತ್ತೀಚೆಗಷ್ಟೇ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಮೂಲಕ ಸೂಪರ್ ಹಿಟ್ ಪಡೆದಿದ್ದ ಅಂಜಲಿ ಬೈಷ್ಕರಣ ವೆಬ್ ಸೀರಿಸ್ ನಲ್ಲಿ ಹೊಸ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಮುಖೇಶ್ ಪ್ರಜಾಪತಿ ನಿರ್ದೇಶನದ ಈ ವೆಬ್ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಟ್ಟು ಆರು ಕಂತುಗಳಲ್ಲಿ ವೆಬ್ ಸರಣಿಯನ್ನು ಮಾಡಲಾಗಿದೆ. ಪುಷ್ಪಾ ಎಂಬ ವೇಶ್ಯೆಯ ಪಾತ್ರದಲ್ಲಿ ಅಂಜಲಿ ನಟಿಸಿದ್ದಾರೆ. ಈ ಪಾತ್ರದಲ್ಲಿ ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸೀರೀಸ್ ಬಗ್ಗೆ ಅಂಜಲಿ ಪ್ರತಿಕ್ರಿಯಿಸಿದ್ದು, ಪುಷ್ಪಾ ಪಾತ್ರದಲ್ಲಿ ಸಾಕಷ್ಟು ಡೆಪ್ತ್ ಇದೆ. ಈ ಪಾತ್ರದಲ್ಲಿ ಭಾವುಕತೆಯನ್ನು ತುಂಬಾ ಶಕ್ತಿಯುತವಾಗಿ ತೋರಿಸಲಾಗಿದೆ. ಆರಂಭದಲ್ಲಿ ಬೋಲ್ಡ್ ಸೀನ್‌ಗಳಲ್ಲಿ ನಟಿಸಲು ಸ್ವಲ್ಪ ಕಷ್ಟ ಅನ್ನಿಸುತ್ತಿತ್ತು. ಇಂತಹ ಪಾತ್ರ ಮಾಡುವುದು ಚಾಲೆಂಜಿಂಗ್ ಎನಿಸಿತು. ಬೋಲ್ಡ್ ಸೀನ್ ನಲ್ಲಿ ನಟಿಸಿದ್ದು ಇದೇ ಮೊದಲು ಎಂಬ ಕಾರಣಕ್ಕೆ ತುಂಬಾ ಭಾವುಕಳಾದೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ. ಆದರೆ ಸವಾಲಾಗಿ ತೆಗೆದುಕೊಂಡು ಈ ಪಾತ್ರದಲ್ಲಿ ನಟಿಸಿದ್ದೇನೆ ಎಂದರು.
ಬೋಲ್ಡ್ ದೃಶ್ಯಗಳಲ್ಲಿ ನಟಿಸುವಾಗ ಸೆಟ್‌ನಲ್ಲಿ ಕೆಲವೇ ಜನರಿದ್ದರು. ಈ ವಿಚಾರದಲ್ಲಿ ಕಾಳಜಿ ವಹಿಸಿದ್ದರಿಂದ ಆರಾಮವಾಗಿ ನಟಿಸಲು ಸಾಧ್ಯವಾಯಿತು ಎನ್ನುತ್ತಾರೆ ನಿರ್ದೇಶಕ ಮುಖೇಶ್ ಪ್ರಜಾಪತಿ.