ಆರ್ಯ ವಿಜ್ಞಾನ ಪಿಯು ಕಾಲೇಜಿನಿಂದ ಏರ್ಪಡಿಸಿದ್ದ ಓರಿಯಂಟೇಷನ್ ಮತ್ತು ್ರೆಶರ್ಸ್‌ ಡೇ ಕಾರ್ಯಕ್ರಮವನ್ನು ಮೇಘನಾ ಉದ್ಘಾಟಿಸಿದರು. ಎನ್.ರಮೇಶ್, ಮೋನಿಶಾ, ಡಾ. ನವೀನ್‌ಕುಮಾರ್, ಶ್ರೀನವಾಕ್ಷರಿ ಎನ್.ಆರ್.ದಾಮೋದರ ಶರ್ಮ ಇದ್ದರು.  
ನ್ಯೂಸ್

ಶಿಸ್ತಿನ ಅಧ್ಯಯನದಿಂದ ಗುರಿ ಸಾಧನೆ ಸುಲಭ

ಶಿವಮೊಗ್ಗ: ಓದಿನ ಶಿಸ್ತು ಬೆಳೆಸಿಕೊಂಡಾಗ ಹಾಗೂ ನಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ಅರಿತಾಗ ಗುರಿ ಮುಟ್ಟಲು ಸಾಧ್ಯ ಎಂದು 2025ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 425 ರ‌್ಯಾಂಕ್ ಪಡೆದ ಮೇಘನಾ ಹೇಳಿದರು.

ಎಲ್‌ಬಿಎಸ್ ನಗರದ ಆರ್ಯ ವಿಜ್ಞಾನ ಪಿಯು ಕಾಲೇಜಿನಿಂದ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಓರಿಯಂಟೇಷನ್ ಮತ್ತು ್ರೆಷರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಸದಾ ಕುತೂಹಲಗಳಿಂದ ಕೂಡಿರುತ್ತದೆ. ಎಸ್‌ಎಸ್‌ಎಲ್‌ಸಿವರೆಗೂ ನಮ್ಮ ಜವಾಬ್ದಾರಿಗಳನ್ನು ಬೇರೆಯವರು ನಿರ್ವಹಣೆ ಮಾಡುತ್ತಾರೆ. ಕಾಲೇಜಿಗೆ ಪ್ರವೇಶ ಪಡೆದ ಮೇಲೆ ನಮ್ಮ ಜವಾಬ್ದಾರಿಗಳನ್ನು ಅರಿತು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ನಮಗೆ ಸಿಗುವ ಸ್ವಾತಂತ್ರೃವನ್ನು ಸ್ವೇಚ್ಛೆಯಾಗಿ ಪರಿಗಣಿಸಬಾರದು. ಶಿಕ್ಷಣದ ವಿಷಯದಲ್ಲಿ ನಿರ್ಲಕ್ಷೃ ತೋರಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ನಿರಂತದ ಓದು ಅನಿವಾರ್ಯ. ಪಿಯುನಲ್ಲಿ ಇದ್ದಾಗಲೇ ಯುಪಿಎಸ್‌ಸಿ ಪ್ರಶ್ನೆಪತ್ರಿಕೆಗಳನ್ನು ಗಮನಿಸಬೇಕು ಎಂದು ತಿಳಿಸಿದರು.

ಸಾಧನೆ ಎನ್ನುವುದು ಅಷ್ಟು ಸುಲಭವಲ್ಲ. ಒಂದು ರೀತಿಯಲ್ಲಿ ಎವರೆಸ್ಟ್ ಏರಿದಂತೆ ಸರಿ. ಸಾಕಷ್ಟು ನಿರೀಕ್ಷೆ ಜತೆಗೆ ನಿರಾಸೆಗಳೂ ಜೀವನದಲ್ಲಿ ಇರುತ್ತವೆ. ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಓದಲು ಆರಂಭಿಸಬೇಕು. ಇದಕ್ಕೆ ಮಾನಸಿಕ ಸಿದ್ಧತೆ ಅಗತ್ಯ. ಸಮಯ ಪ್ರಜ್ಞೆ ಬಹಳ ಮುಖ್ಯ ಎಂದರು.

ಬಾರ್ಕೂರಿನ ಶ್ರೀನವಾಕ್ಷರಿ ಎನ್.ಆರ್. ದಾಮೋದರ ಶರ್ಮ ಮಾತನಾಡಿ, ಒಳ್ಳೆಯ ಆಚಾರ-ವಿಚಾರದ ಕಡೆಗೆ ನಾವು ಹೆಜ್ಜೆ ಇಡಬೇಕು. ಶಿಕ್ಷಣವೇ ಬದುಕಿನ ಅಡಿಗಲ್ಲು. ನಮ್ಮ ಭಾರತ ಭಾವಪೂರ್ಣ ನೆಲವಾಗಿದೆ. ನಮ್ಮದು ಕರ್ಮಭೂಮಿ. ಈ ಭೂಮಿಯ ಬಗ್ಗೆ ನಾವೆಲ್ಲರೂ ಗೌರವ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಉತ್ತಮ ಶಿಕ್ಷಣ ಸೇವೆ ಸಲ್ಲಿಸುವ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಿದ್ದು, ನುರಿತ ಉಪನ್ಯಾಸಕ ವರ್ಗ ಇದೆ. ಪಾಲಕರ ಬೆಂಬಲವೇ ನಮ್ಮ ಬಲ. ನಮ್ಮ ಸಂಸ್ಥೆಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ 18 ವರ್ಷಗಳಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ ಸಾಧನೆ ಮಾಡುತ್ತಿದೆ ಎಂದರು. ಸಂಸ್ಥೆ ನಿರ್ದೇಶಕ ಮುಕುಂದ್, ಮೋನಿಶಾ, ಪ್ರಾಚಾರ್ಯ ಡಾ. ನವೀನ್‌ಕುಮಾರ್, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯೆ ಸುನೀತಾದೇವಿ ಇತರರಿದ್ದರು.