ನ್ಯೂಸ್

ಗ್ರಾಮೀಣ ಪ್ರದೇಶದ ಮಕ್ಕಳ ಸಾಧನೆ

ಕಿಕ್ಕೇರಿ : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್ ಕಾಸ್ಟ್ ಭಯ ಕಾಡಿದರೂ ಬಹುತೇಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಉತ್ತಮ ಫಲಿತಾಂಶ ಪಡೆದಿದ್ದಾರೆ.

ಕಿಕ್ಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 121 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 67ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ. 55.37 ಫಲಿತಾಂಶ ಲಭಿಸಿದೆ. ಅತ್ಯುನ್ನತ 5, ಪ್ರಥಮ 36, ದ್ವಿತೀಯ 36, ತೃತೀಯ ದರ್ಜೆಯಲ್ಲಿ 18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮಮತಾ(590), ಗಾನವಿ(582), ಅಮೃತಾ(575), ಕೀರ್ತನಾ(572), ಭವಾನಿ(552) ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ: 25ಮಕ್ಕಳು ಪರೀಕ್ಷೆಗೆ ಹಾಜರಾಗಿ 11ಮಕ್ಕಳು ತೇರ್ಗಡೆಯಾಗಿದ್ದಾರೆ. ಶೇ.25 ಫಲಿತಾಂಶ ಬಂದಿದೆ. ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 26ಮಕ್ಕಳು ಪರೀಕ್ಷೆ ಬರೆದು 15ಮಕ್ಕಳು ತೇರ್ಗಡೆ ಹೊಂದಿದ್ದು ಶಾಲೆಗೆ ಶೇ. 57.8ಫಲಿತಾಂಶ ಲಭಿಸಿದೆ. ಕೃಷ್ಣಾಪುರದಲ್ಲಿ ಅಲೆಮಾರಿ ಜನಾಂಗ, ಹಿಂದುಳಿದ ಜನಾಂಗದವರು ಇರುವ ಸರ್ಕಾರಿ ಪೌಢಶಾಲೆಗೆ ಶೇ. 52ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ 25ವಿದ್ಯಾರ್ಥಿಗಳಲ್ಲಿ 13ಮಕ್ಕಳು ಉತ್ತೀರ್ಣರಾಗಿದ್ದಾರೆ.

ಮಾದಾಪುರ ಸರ್ಕಾರಿ ಪ್ರೌಢಶಾಲೆಗೆ ಶೇ.50ಫಲಿತಾಂಶ ಲಭಿಸಿದ್ದು ಪರೀಕ್ಷೆಗೆ ಹಾಜರಾದ 14ವಿದ್ಯಾರ್ಥಿಗಳಲ್ಲಿ 7ವಿದ್ಯಾರ್ಥಿಗಳ ತೇರ್ಗಡೆಯಾಗಿದ್ದಾರೆ. ಉನ್ನತ(1), ಪ್ರಥಮ(4), ದ್ವಿತೀಯ(2) ದರ್ಜೆ ಪಡೆದಿದ್ದಾರೆ. ಮಾದಾಪುರ ಮುರಾರ್ಜಿ ವಸತಿ ಶಾಲೆಯಲ್ಲಿ 49ಮಕ್ಕಳು ಪರೀಕ್ಷೆಗೆ ಹಾಜರಾಗಿ 45ಮಕ್ಕಳು ತೇರ್ಗಡೆಯಾಗಿದ್ದಾರೆ. ಶೇ. 91.83ಫಲಿತಾಂಶ ಬಂದಿದೆ. ಉನ್ನತ ದರ್ಜೆ(11), ಪ್ರಥಮ(27), ದ್ವಿತೀಯ(6), ತೃತೀಯ(1) ದರ್ಜೆ ಹೊಂದಿದ್ದಾರೆ. ಆರ್. ಕುಮುದಾ(607), ಜಿ.ಜೆ. ಅಪೇಕ್ಷಾ(599) ಅತೀ ಹೆಚ್ಚು ಅಂಕಪಡೆದು ಶಾಲೆ ಟಾಫರ್ ಆಗಿದ್ದಾರೆ. ಹಿಂದಿಯಲ್ಲಿ ಆರ್. ಕುಮುದಾ ನೂರಕ್ಕೆ 100 ಅಂಕ ಪಡೆದಿದ್ದಾರೆ.

ಆನೆಗೂಳ: ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದು 9ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 40.9 ಫಲಿತಾಂಶ ಬಂದಿದೆ. ಸಾಸಲು ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ 30ವಿದ್ಯಾರ್ಥಿಗಳು ಪರೀಕ್ಷೆ ಬರೆದು 22ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 73ಫಲಿತಾಂಶ ಲಭಿಸಿದೆ. ಅನಿಲ್(523), ಸಹನ(518), ಶ್ರೇಯಾ(500) ಅಂಕಪಡೆದು ಉನ್ನತ ದರ್ಜೆ ಹೊಂದಿದ್ದಾರೆ.

ಐಕನಹಳ್ಳಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಸವೇಶ್ವರ ಪ್ರೌಢಶಾಲೆಗೆ ಶೇ. 24ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ 25 ಮಕ್ಕಳಲ್ಲಿ 06 ಮಕ್ಕಳು ಪಾಸಾಗಿದ್ದಾರೆ. ಮಂದಗೆರೆ ಹೇಮಾವತಿ ಪ್ರೌಢಶಾಲೆಯಲ್ಲಿ 26ವಿದ್ಯಾರ್ಥಿಗಳು ಹಾಜರಾಗಿ 17ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.65.38 ಫಲಿತಾಂಶ ಲಭಿಸಿದೆ.

ಕೇಂಬ್ರಿಡ್ಜ್ ಶಾಲೆಗೆ ಶೇ. 91.48ಫಲಿತಾಂಶ ಲಭಿಸಿದ್ದು. 48ವಿದ್ಯಾರ್ಥಿಗಳು ಪರೀಕ್ಷೆ ಬರೆದು 44ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಉನ್ನತ(15), ಪ್ರಥಮ(21) ದರ್ಜೆ ಪಡೆದಿದ್ದಾರೆ. ಕೆ.ಎನ್. ರೋಹಿತ್‌ಕುಮಾರ್(598), ಕೆ.ಎನ್. ರಮ್ಯಾ(596), ಬಿ.ಎಸ್. ದೀಪಿಕಾ(581), ಎಂ. ಕೀರ್ತಿರಾಜ್(581) ಅಂಕಪಡೆದಿದ್ದಾರೆ.

ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿದ ಕನ್ನಡ ಕುವರರಾಗಿ ಕೆ.ಎಂ. ರೋಹಿತ್‌ಕುಮಾರ್, ಎಂ. ಕೀರ್ತಿರಾಜ್ ಶಾಲೆಗೆ ಕೀರ್ತಿ ತಂದಿದ್ದಾರೆ.

ಕೋಡಿಮಾರನಹಳ್ಳಿ ಚೈತನ್ಯ ಪ್ರೌಢಶಾಲೆಗೆ ಶೇ. 81ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ 36ವಿದ್ಯಾರ್ಥಿಗಳಲ್ಲಿ 29ಮಕ್ಕಳು ಉತ್ತೀರ್ಣರಾಗಿದ್ದಾರೆ.. ಉನ್ನತ(6), ಪ್ರಥಮ(20), ದ್ವಿತೀಯ(3) ದರ್ಜೆ ಪಡೆದಿದ್ದಾರೆ. ಎಸ್. ಗೀತಾ(612), ಇಂಫನ ಎನ್. ಗೌಡ(602) ಅಂಕಪಡೆದಿದ್ದಾರೆ.