ಕೆ.ಆರ್.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಜಿ.ಕೆ.ಹರೀಶ್, ಪ್ರೊ.ಬಿ.ಟಿ.ವಿಜಯ್, ಡಾ.ಬಿ.ವಿ.ಗಣೇಶ್, ಡಾ.ಸಿ.ಆರ್.ಕಿರಣ್‌ಕುಮಾರ್, ಡಾ.ಎಸ್.ಶಂಕರ್, ಡಾ.ಸೀಮಾ ಬಡಿಗೇರ್, ಎಚ್.ಡಿ.ಕಾಂತರಾಜು, ಪ್ರಶಾಂತ್, ಕೆ.ಜಿ.ಅಂಬಿಕಾ, ತ್ರಿವೇಣಿ ಇನ್ನಿತರರು ಇದ್ದರು.
ಕೆ.ಆರ್.ನಗರ: ಕಾಲೇಜು ವಿದ್ಯಾರ್ಥಿ ಜೀವನ ಬಹುಮುಖ್ಯವಾದ ಘಟ್ಟವಾಗಿದ್ದು ಉತ್ತಮ ಪ್ರಜೆಯಾಗಿ ತಮ್ಮ ಜೀವನದ ಬದುಕು ಕಟ್ಟಿಕೊಳ್ಳುವ ತಿರುವ ಪಡೆಯುವಂತಹ ಸಮಯವಾದ್ದರಿಂದ ವಿದ್ಯಾರ್ಥಿ ದಿಸೆಯಲ್ಲೇ ಉತ್ತಮವಾಗಿ ಬಳಸಿಕೊಳ್ಳಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದು ಹೋದ ಕಾಲೇಜು ದಿನಗಳು ಮತ್ತೆ ಸಿಗುವುದಿಲ್ಲ. ಈ ಅವಧಿ ಪ್ರತಿಯೊಬ್ಬರ ಬದುಕು ಉತ್ತಮವಾಗಿಸಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡಲು, ಕನಸು ಕಾಣುವ ಜತೆಗೆ ಉತ್ತಮ ಮಾರ್ಗದರ್ಶನ ಪಡೆದು ಶ್ರಮ, ಪ್ರಾಮಾಣಿಕ ಪ್ರಯತ್ನ, ದೃಢವಾದ ಸಂಕಲ್ಪ ಹೊಂದಿದ್ದರೆ ಸಾಧನೆ ಸುಲಭವಾಗಲಿದೆ ಎಂದು ಹೇಳಿದರು.
ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣಕ್ಕೆ ಶೀಘ್ರವೇ ಭೂಮಿಪೂಜೆ ಮಾಡಲಾಗುವುದು ಎಂದ ಶಾಸಕರು, ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿವೇತನ ಪಾವತಿ ಆಗಿಲ್ಲದ ಬಗ್ಗೆ ನನಗೆ ದೂರುಗಳು ಬಂದಿವೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಶೀಘ್ರವಾಗಿ ಸರ್ಕಾರ ಸಮಸ್ಯೆ ಬಗೆಹರಿಸಲಿದೆ ಎಂದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ನಿಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಶಾಸಕರು, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಬೋಧಕ ವರ್ಗ, ಆಡಳಿತ ವರ್ಗ ಹಾಗೂ ಅಭಿವೃದ್ಧಿ ಸಮಿತಿ ಸೇರಿ ಕಾಲೇಜನ್ನು ಮಾದರಿಯಾಗಿಸೋಣ ಎಂದರು.
- ತಾಲೂಕು ಪಂಚಾಯಿತಿ ಇಒ ಜಿ.ಕೆ.ಹರೀಶ್ ಮಾತನಾಡಿ, ಈ ಜಗತ್ತು ಗೆದ್ದವರನ್ನು ಮಾತ್ರ ನೆನಪಿಸಿಕೊಳ್ಳುತ್ತದೆ. ಆದ್ದರಿಂದ ಪದವಿಯಲ್ಲಿ ನಾವು ಗಳಿಸುವ ಚಿನ್ನದ ಪದಕಕ್ಕಿಂತ ಪರಿಸ್ಥಿತಿಗಳು ಮಾತ್ರ ಮನುಷ್ಯನ ವ್ಯಕ್ತಿತ್ವ ಸೃಷ್ಟಿ ಮಾಡುತ್ತವೆ. ಕಠಿಣ ಪರಿಶ್ರಮ ಇದ್ದರೆ ಗುರಿ ಸಾಧನೆ ಸುಲಭವಾಗಲಿದೆ ಎಂದರು.
ಕಾರ್ಯಕ್ರಮವನ್ನು ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಜಯಸುಬ್ಬಯ್ಯ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಮಾತನಾಡಿದರು.
- ದಸರಾ ಕ್ರೀಡಾಕೂಟ, ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.
- ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ಸದಸ್ಯ ನಟರಾಜು, ತಾಲೂಕು ಕುರುಬರ ಸಂಘದ ನಿರ್ದೇಶಕ ಅಪ್ಪಾಜಿಗೌಡ, ಕಾಲೇಜು ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಬಿ.ವಿ.ಗಣೇಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಸಿ.ಆರ್.ಕಿರಣ್‌ಕುಮಾರ್, ರೆಡ್ ಕ್ರಾಸ್ ಸಮಿತಿ ಸಂಚಾಲಕ ಡಾ.ಎಸ್.ಶಂಕರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಸೀಮಾ ಬಡಿಗೇರ್, ಐ.ಕ್ಯೂ.ಎ.ಸಿ ಸಂಚಾಲಕ ಎಚ್.ಡಿ.ಕಾಂತರಾಜು, ಪ್ರಾಧ್ಯಾಪಕ ಪ್ರಶಾಂತ್, ಸಾಂಸ್ಕೃತಿಕ ಸಮಿತಿ ವಿದ್ಯಾರ್ಥಿ ಅಧ್ಯಕ್ಷೆ ಕೆ.ಜಿ.ಅಂಬಿಕಾ, ಕಾರ್ಯದರ್ಶಿ ತ್ರಿವೇಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.