ನ್ಯೂಸ್

ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣದ ಆರೋಪಿ ಸೆರೆ

ಮಂಜುನಾಥ.ಕೆ

ಬೆಂಗಳೂರು: ಬ್ಯಾಟರಾಯನಪುರ ಸಮೀಪದ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣದ ಸಂಬಂಧ ಆರೋಪಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಕಾರ್ತಿಕ್(೨೮) ಬಂಧಿತ. ಆರೋಪಿಯು ನೇಪಾಳ ಮೂಲದ ಗಣೇಶ್ ಬಹದ್ದೂರ್ (೩೦)ನನ್ನು ಕೊಂದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಂಬರ್ ಲೇಔಟ್‌ನಲ್ಲಿ ಇರುವ ಮೋರ್ ಗೋದಾಮಿನಲ್ಲಿ ಮೃತ ಗಣೇಶ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರು. ಆರೋಪಿ ಕಾರ್ತಿಕ್ ಗೂಡ್ಸ್ ಆಟೋ ಚಾಲಕನಾಗಿದ್ದು, ೆ.೨೭ರಂದು ಗೋದಾಮಿಗೆ ಬಂದಿದ್ದಾಗ ಗೇಟ್ ತೆಗೆಯುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಆ ವೇಳೆ ಸುಮ್ಮನೆ ಹೋಗಿದ್ದ ಆರೋಪಿ ೆ.೨೮ರ ಸಂಜೆ ೬.೩೦ಕ್ಕೆ ವಾಪಸ್ ಬಂದು ಸೆಕ್ಯೂರಿಟಿ ಗಾರ್ಡ್ ಗಣೇಶ್‌ಗೆ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.