Oplus_0 
ನ್ಯೂಸ್

ಆರೋಪಿಗಳನ್ನು ಬಂಧಿಸಿದಕ್ಕಾಗಿ ಪಿಎಸ್‌ಐಗೆ ಸನ್ಮಾನ

ರಾಣೆಬೆನ್ನೂರ: ನಗರದ ವಸತಿ ನಿಲಯಗಳ ಬಳಿ ವಿದ್ಯಾರ್ಥಿನಿಯರ ಎದುರು ಅನುಚಿತವಾಗಿ ವರ್ತಿಸಿದ ಆರೋಪಿಗಳನ್ನು ಬಂಧಿಸಿದ ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರನ್ನು ಎಸ್‌ಎಫ್‌ಐ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಸವರಾಜ ಎಸ್., ವಸತಿ ನಿಲಯದ ಮೇಲ್ವಿಚಾರಕಿ ಯಶೋಧಾ ಅಂತರವಳ್ಳಿ, ಗೌತಮ ಸಾವಕ್ಕನವರ, ಬಸವರಾಜ ಕೊಣಸಾಲಿ, ರಾಧಿಕಾ ಹೊನ್ನಪ್ಪನವರ ಮತ್ತಿತರರಿದ್ದರು.