ಜಮಾಲ್ ಕುಡು ಹಾಡಿನ ಮೂಲಕ ಅನಿಮಲ್ ಚಿತ್ರದಲ್ಲಿ ಫೇಮಸ್ ಆಗಿದ್ದು ಅಂದ್ರೆ ಬಾಬಿ ಡಿಯೋಲ್. ಡಿ.1 ರಂದು ಬಿಡುಗಡೆಯಾದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಮೂವಿ ಈಗಾಗಲೇ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸಿದ ನಟಿ ನಟಿಯರ ಸಂಭಾವನೆಯೂ ದೊಡ್ಡ ಮೊತ್ತವಾಗಿದೆ.
ಚಿತ್ರದ ಜಮಾಲ್ ಕುಡು ಹಾಡಿಗೆ ವೈನ್ ಬಾಟಲ್ ಒಂದನ್ನ ತಲೆಯ ಮೇಲೆ ಇಟ್ಟುಕೊಂಡು ಸ್ಟಪ್ ಹಾಕಿದ ಬಾಬಿ ಡಿಯೋಲ್ ಮತ್ತೊಂದು ಹಂತಕ್ಕೆ ಫೇಮಸ್ ಆಗಿದ್ದಾರೆ. ಇದೀಗ ಬಾಬಿ ಡಿಯಾಲ್ ಅಸ್ತಿಯ ಬಗ್ಗೆ ಒಂದಿಷ್ಟು ಚರ್ಚೆಯಾಗತೊಡಗಿದೆ. ಅನಿಮಲ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಬಿ ಡಿಯೋಲ್ ಸಂಭಾವನೆ ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಹಾಗಿದ್ರೆ ಬಾಬಿ ಡಿಯೋಲ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
ಅದನ್ನ ಹೊರತು ಪಡಿಸಿ ಬಾಬಿ ಡಿಯೋಲ್ ಒಟ್ಟು ಆಸ್ತಿ 66 ಕೋಟಿ ರೂಪಾಯಿ. ಅಂದ್ರೆ ಬಾಬಿ ಡಿಯೋಲ್ ಒಂದು ವರ್ಷಕ್ಕೆ 6 ಕೋಟಿಯಷ್ಟು ಗಳಿಕೆಯನ್ನ ಸಿನಿಮಾ ಮತ್ತು ಸೋಷಿಯಲ್ ಮೀಡಿಯಾ, ಅಡ್ವಟ್ಐಸ್ಮೆಂಟ್ಗಳಿಂದ ಪಡೆಯುತ್ತಾರೆ.
8.5 ಕೋಟಿ ಬೆಲೆ ಬಾಳುವ ವಿಭಿನ್ನ ಕಾರ್ಗಳ ಕಲೆಕ್ಷನ್…!
ಬಾಬಿ ಡಿಯೋಲ್ ಬಳಿ ಲ್ಯಾಂಡ್ ರೋವರ್ ರೇಂಜ್ ರೋವರ್, ಪೋರ್ಷೆ ಕೇಯೆನ್ SUV, ಮರ್ಸೀಡಿಸ್ ಬೆಂಜ್ ಎಸ್ ಕ್ಲಾಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್, ಲ್ಯಾಂಡ್ ರೋವರ್ ಫ್ರೀಸ್ಪೋರ್ಟ್ ಕಾರ್ಗಳಿವೆ. ಈ ಕಾರ್ಗಳು ತಾವು ಲಾಂಗ್ ಟ್ರಿಪ್, ಶಾರ್ಟ್ ರೋಡ್ ಟ್ರಿಪ್ ಮತ್ತು ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಬಳಸುತ್ತಾರೆ. ಜತೆಗೆ ಈ ಕಾರ್ನ ಅಷಟೂ ಕಲೆಕ್ಷನ್ಗೆ 8.5 ಕೋಟಿಯಷ್ಟು ಹಣವನ್ನ ವೆಚ್ಚಿಸಿದ್ದಾರೆ.
ರಿಯಲ್ ಎಸ್ಟೇಟ್ಗಾಗಿ 6 ಕೋಟಿ ಹೂಡಿಕೆ ಮಾಡಿದ್ದಾರೆ..!
ಬಾಬಿ ಡಿಯೋಲ್ ಮುಂಬೈನಲ್ಲಿ ವೈಲ್ ಪಾರ್ಲೆ ಹೆಸರಿನ 6 ಕೋಟಿ ಮೌಲ್ವದ ಭವ್ಯ ಬಂಗಲೆಯನ್ನ ಹೊಂದಿದ್ದಾರೆ. ಜತೆಗೆ ಭಾರತದಾದ್ಯಂತ ಸಾಕಷ್ಟು ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ಗಳನ್ನ ಮಾಡಿದ್ದಾರೆ. ಅಷ್ಟೇ ಅಲ್ಲ ವಿಜಯತ ಫಿಲ್ಮ್ ಹೆಸರಿನಲ್ಲಿ ತಮ್ಮದೇ ಪ್ರೊಡಕ್ಷನ್ ಹೌಸ್ ಸಹ ಇದೆ.
ಇನ್ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಯಲ್ಲಿ ದೊಡ್ಡ ಮಟ್ಟಿನ ಫಾಲೋವರ್ಸ್..!
ಬಾಬಿ ಡಿಯೋಲ್ ತಮ್ಮದೇ ಪ್ರಡಕ್ಷನ್ ಹೌಸ್, ಭವ್ಯ ಬಂಗಲೆ, ಎಸ್ಟೇಸ್ಗಳು ಮಾತ್ರವಲ್ಲದೆ ಇನ್ಸ್ಟಾಗ್ರಾಂ ಮತ್ತು ಎಕ್ಸ್ ಕಾತೆಯಲ್ಲಿ ದೊಡ್ಡ ಮಟ್ಟಿನ ಫ್ಯಾನ್ ಫಾಲೋವಿಮಗನ್ನ ಹೊಂದಿದ್ದಾರೆ. 'ಬಾಬಿ'ಗೆ ಇನ್ಸ್ಟಾಗ್ರಾಂನಲ್ಲಿ 2.8 ಮಿಲಿಯನ್ ಫಾಲೋವರ್ಸ್ ಇದ್ರೆ, ಎಕ್ಸ್ ಖಾತೆಯಲ್ಲಿ 450 ಸಾವಿರ ಫಾಲೋವರ್ಸ್ಗಳಿದ್ದಾರೆ.