ದಾವಣಗೆರೆ: ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಾಗಿ ಎರಡು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಗೌಡಿಕಟ್ಟೆಯಲ್ಲಿ ನಡೆದಿದೆ.
ಒಂದು ಬೈಕ್ನಲ್ಲಿ ಇಬ್ಬರು ಪಲ್ಲಾಗಟ್ಟೆಯಿಂದ ಬಣಕಲ್ಲು ಗ್ರಾಮಕ್ಕೆ ತೆರಳುತ್ತಿದ್ದರು. ಇನ್ನೊಂದು ಬೈಕ್ನಲ್ಲಿ ಮೂವರು ಗಾಣಗಟ್ಟೆಯಿಂದ ಸೂರಡ್ಡಿಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು. ಗೌಡಿಕಟ್ಟೆ ಕ್ರಾಸ್ ಬಳಿ ಮುಖಾಮುಖಿ ಅಪಘಾತವಾಗಿದೆ.
ಒಟ್ಟು ಮೂವರು ಗಾಯಗೊಂಡಿದ್ದು, ಪುಟ್ಟ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಾಳುಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಡಿಮಾಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)