ನ್ಯೂಸ್

ಪುಣೆ-ಮುಂಬೈ ಎಕ್ಸ್​​ಪ್ರೆಸ್​ ಹೈವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಟಿ ಶಬಾನಾ ಆಜ್ಮಿ ಗಾಯ

ಮುಂಬೈ: ಪುಣೆ ಎಕ್ಸ್​ಪ್ರೆಸ್​ ಹೈವೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಟಿ ಶಬಾನಾ ಆಜ್ಮಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಅವರನ್ನು ನವಿ ಮುಂಬಯಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈಗೆ ಅಂದಾಜು 60 ಕಿ.ಮೀ. ದೂರ ಇರುವ ರಾಯಗಢ ಜಿಲ್ಲೆಯ ಬಳಿ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ನಟಿ ಶಬಾನಾ ಆಜ್ಮಿ ಅವರು ಪುಣೆಯಿಂದ ಮುಂಬೈಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರು ಟ್ರಕ್​ಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೆದ್ದಾರಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)