ನ್ಯೂಸ್

Accident | ರಸ್ತೆ ದಾಟುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದ ಕಾರು.. ಸ್ಥಳದಲ್ಲೆ ಮೃತ

ಬೆಂಗಳೂರು: ವೇಗವಾಗಿ ಬಂದ ಕಾರು ರಸ್ತೆ ದಾಟುತ್ತಿದ್ದ ಯುವತಿ (30) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ (Accident) ಘಟನೆ ಕೆಂಗೇರಿ ಬಳಿ ನಡೆದಿದೆ.

20 ವರ್ಷದ ಧನುಷ್​ ಎಂಬ ಯುವಕ ಕುಡಿದ ಮತ್ತಲ್ಲಿ ವೇಗವಾಗಿ ಕಾರು ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಅಪಘಾತ ಬಳಿಕ ಸ್ಥಳದಿಂದ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಅಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೂಡಲೇ ಕೋರ್ಟ್​ಗೆ ಹಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆ.

ಇತನ ಮೇಲೆ ಕೊಲೆ ಸಮಾನವಲ್ಲದ ನರಹತ್ಯೆ ಆರೋಪ ಹೊರಿಸಲಾಗಿದೆ. ಖಾಸಗಿ ಬಸ್​ ಮಾಲೀಕ ಶಿವ ಎಂಬವವರ ಮಗ ಧನುಷ್​ ಎಂದು ಗುರುತಿಸಲಾಗಿದೆ.

ಘಟನೆ ನಡೆದ ತಕ್ಷಣವೇ ಆರೋಪಿಯನ್ನು ಬಂಧಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ಭಾಗದ ಡಿಸಿಪಿ ತಿಳಿಸಿದ್ದಾರೆ.

ಇನ್ನು ಸ್ಥಳೀಯ ಮಾಹಿತಿ ಪ್ರಕಾರ, ಧನುಷ್​ ತಂದೆ ಐಷಾರಾಮಿ (ಬೆಂಜ್) ಕಾರನ್ನು ಖರೀದಿಸಿದ್ದರು. ಇದೇ ಕಾರನ್ನು ತಗೆದುಕೊಂಡ ಧನುಷ ಯಶವಂತಪುರ ಮಾಲ್​ಗೆ ತೆರಳಿದ್ದರು. ಅಲ್ಲಿ ವಿಪರಿತ ಮದ್ಯ ಸೇವಿಸಿದ ಧನುಷ್​, ಲಾಂಗ್​ ಡ್ರೈವ್​ ಹೊಗಲು ನಿರ್ಧರಿಸಿ, ಅಲ್ಲಿಂದ ಮೈಸೂರು ರೋಡ್​ಗೆ ತೆರಳುವಾದ ಈ ಘಟನೆ ನಡೆದಿದೆ ಎನ್ನಲಾಗಿದೆ.