ನ್ಯೂಸ್

ಎಸಿ ಘಟಕಕ್ಕೆ ಬೆಂಕಿ; ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ| haryana

ಫರಿದಾಬಾದ್: ಹವಾನಿಯಂತ್ರಣ ಯಂತ್ರದ ಹೊರಾಂಗಣ ಘಟಕಕ್ಕೆ ಬೆಂಕಿ ತಗುಲಿ ಒಂದೇ ಕುಟುಂಬದ ಮೂವರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮನೆಯೊಳಗೆ ಪತಿ, ಪತ್ನಿ ಮತ್ತು ಅವರ ಮಗಳು ಹಾಗೂ ಸಾಕು ನಾಯಿ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದು, ಕುಟುಂಬದ ಮಗ ಕಟ್ಟಡದ ಕಿಟಕಿಯಿಂದ ಹಾರಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ಕುಟುಂಬವು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದು, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನು.?

(ಏಜೆನ್ಸೀಸ್)

ಗ್ರೀನ್‌ಫೀಲ್ಡ್​ ಕಾಲೋನಿಯ ಗೇಟ್ ಸಂಖ್ಯೆ 10 ರ ಒಳಗಿನ ಫ್ಲಾಟ್‌ನ ಎಸಿ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಮೊದಲ ಮಹಡಿಯಿಂದ ಬೆಂಕಿ ಹರಡುತ್ತಿದ್ದಂತೆ, ಕುಟುಂಬವು ತಪ್ಪಿಸಿಕೊಳ್ಳಲು ಪ್ರಯತ್ನಿಸಿತು ಆದರೆ ದಟ್ಟವಾದ ಹೊಗೆಯಿಂದಾಗಿ ಎರಡನೇ ಮಹಡಿಯಲ್ಲಿ ಸಿಲುಕಿಕೊಂಡಿತು. ದುರಾದೃಷ್ಟವಷಾತ್​ದಂಪತಿ, ಅವರ ಮಗಳು ಮತ್ತು ಅವರ ಸಾಕು ನಾಯಿ ಈ ಘಟನೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.