ಲಕ್ನೋ: ಲಕ್ನೋ-ಬರೌನಿ ಎಕ್ಸ್‌ಪ್ರೆಸ್ ರೈಲಿನ ಎಸಿ ವಿಭಾಗದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಕೋಚ್ನಲ್ಲಿ ಎಸಿ ಸಮಸ್ಯೆ ಕಂಡು ಬಂದ ಪರಿಣಾಮ, ಸ್ಥಳಕ್ಕೆ ಬಂದ ಸಿಬ್ಬಂದಿ ಎಸಿ ಡಕ್ಟ್ನ್ನು ಪರಿಶೀಲಿಸಲು ಹೋದಾಗ ಸುಮಾರು ಕ್ಕೂ ಹೆಚ್ಚು ಬಾಟಲಿಗಳು ಪತ್ತೆಯಾಗಿವೆ.
ಇದನ್ನೂ ಓದಿ: ಆ.19 ರೊಳಗೆ ಅಳಿಸಲಾದ 65 ಲಕ್ಷ ಮತದಾರರ ಗುರುತನ್ನು ಬಹಿರಂಗಪಡಿಸಿ; ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ| supreme
ತಂತ್ರಜ್ಞರು ಎಸಿ ಡಕ್ಟ್ ತೆರೆದಾಗ, ಒಳಗೆ ಅಪಾರ ಸಂಖ್ಯೆಯಲ್ಲಿ ಮದ್ಯದ ಬಾಟಲಿಗಳು ಅಡಗಿರುವುದನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಇಡೀ ಕೋಚ್ ಅನ್ನು ಹುಡುಕಿದಾಗ 150 ಕ್ಕೂ ಹೆಚ್ಚು ಬಾಟಲಿಗಳು ಪತ್ತೆಯಾಗಿವೆ. ಮಂಗಳವಾರ, ರೈಲಿನ ಎರಡನೇ ಎಸಿ ಕೋಚ್ (ಎ-2) ನಲ್ಲಿ ಸೀಟ್ ಸಂಖ್ಯೆ 40 ರಲ್ಲಿ ಕುಳಿತಿದ್ದ ವಿಪಿನ್ ಕುಮಾರ್, ಕೂಲಿಂಗ್ ಕೊರತೆಯ ಬಗ್ಗೆ ದೂರು ನೀಡಿದ್ದಾರೆ. ತಾಂತ್ರಿಕ ಸಿಬ್ಬಂದಿ ರೈಲಿಗೆ ಬಂದು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಿಬ್ಬಂದಿ ಎಸಿ ಡಕ್ಟ್ ತೆರೆದ ತಕ್ಷಣ, ಅದರೊಳಗೆ ಕಾಗದದಲ್ಲಿ ಸುತ್ತಿದ ಕೆಲವು ಬಾಟಲಿಗಳು ಕಂಡುಬಂದಿವೆ.
ಇದನ್ನೂ ಓದಿ: ಕಿಶ್ತ್ವಾರ್ನಲ್ಲಿ ಭಾರಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ; 12 ಮೃತದೇಹಗಳು ಪತ್ತೆ; ಮುಂದುವರಿದ ಶೋಧ| Cloudburst
(ಏಜೆನ್ಸೀಸ್)
ತಕ್ಷಣವೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದಿ ಅಧಿಕಾರಿಗಳು ಇಡೀ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಾಟಲಿಗಳನ್ನು ರೈಲಿನಲ್ಲಿ ಯಾರು ಬಚ್ಚಿಟ್ಟಿದ್ದಾರೆ ಎಂಬುದರ ಕುರಿತು ಸಂಪೂರ್ಣ ತನಿಖೆ ಆರಂಭಿಸಲಾಗಿದೆ. ಈ ಕೋಚ್ ಅನ್ನು ಮದ್ಯ ಕಳ್ಳಸಾಗಣೆಗಾಗಿ ಬಳಸಲಾಗಿದೆ ಎಂದು ಶಂಕಿಸಲಾಗಿದೆ. ಇನ್ನೂ ಸೋನೆಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ, ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಅಲ್ಲಿನ ಕೂಲಿಂಗ್ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.