ನ್ಯೂಸ್

ಅಬುದಾಬಿಯಲ್ಲಿ ಯಶಸ್ವಿಯಾಗಿ ನಡೆದ ಸಮ್ಮೇಳನ

Bengaluru - Political - Shivananda Tagadur

‘ಸುಸ್ಥಿರ ಭವಿಷ್ಯಕ್ಕಾಗಿ ಜವಾಬ್ದಾರಿಯುತ ಹೂಡಿಕೆ’ ಎಂಬ ವಿಷಯದ ಮೇಲೆ ಇನ್‌ಸ್ಟಿಟ್ಯೂಟ್ ಆ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿಎಸ್‌ಐ) ಮಧ್ಯಪ್ರಾಚ್ಯದ ಅಬುಧಾಬಿಯಲ್ಲಿ ಆಯೋಜಿಸಿದ್ದ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
ಈ ಸಮ್ಮೇಳನವು ಐಸಿಎಸ್‌ಐಗೆ ಒಂದು ಮೈಲಿಗಲ್ಲು ಸೃಷ್ಟಿಸಿದೆ. ಈ ವೇಳೆ ಐಸಿಎಸ್‌ಐ ಗೈಡಿಂಗ್ ಪ್ರಿನ್ಸಿಪಲ್ಸ್ ಆನ್ ಸ್ಟೀವಾರ್ಡ್‌ಶಿಪ್ (ಐಜಿಪಿಎಸ್) ಆರಂಭಿಸುವ ಮೂಲಕ ಸಾಂಸ್ಥಿಕ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರನ್ನು ಮತ್ತಷ್ಟು ಸಶಕ್ತಗೊಳಿಸಿದೆ. ಈ ಐಜಿಪಿಎಸ್ ಜವಾಬ್ದಾರಿಯುತ ಹೂಡಿಕೆ, ಪರಿಸರ, ಸಾಮಾಜಿಕ ಮತ್ತು ಆಡಳಿತದ ಅಂಶಗಳನ್ನು ಒಳಗೊಂಡಿದ್ದು, ಸಮರ್ಥನೀಯ ಮತ್ತು ಜವಾಬ್ದಾರಿಯುತ ಹೂಡಿಕೆಗೆ ಇದು ಅತ್ಯುತ್ತಮವಾದ ಮಾರ್ಗಸೂಚಿಯಾಗಿದೆ.
ಇದು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಗಡಿಯಾಚೆಗಿನ ವ್ಯವಹಾರಗಳನ್ನು ಉತ್ತಮಗೊಳಿಸಲಿದೆ. ಆರ್ಥಿಕತೆಯೊಂದಿಗೆ ಹೆಣೆದುಕೊಂಡಿರುವ ಸುಸ್ಥಿತ ಹಣಕಾಸು ಬೆಳವಣಿಗೆ ಮತ್ತು ಆಡಳಿತ ವ್ಯಹಾರಗಳನ್ನು ವೃದ್ಧಿಸಲಿದೆ ಎಂದು ಉದ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಸಮ್ಮೇಳನದಲ್ಲಿ ಯುಎಇಯ ಆರ್ಥಿಕ ಸಚಿವಾಲಯದ ಐಪಿ ವಲಯದ ಸಹಾಯಕ ಉಪಕಾರ್ಯದರ್ಶಿ ಡಾ. ಅಬ್ದೆಲ್‌ರೆಹ್ಮಾನ್, ಯುಎಇ ಭಾರತೀಯ ರಾಯಭಾರಿ ಕಚೇರಿಯ ಡೆಪ್ಯೂಟಿ ಚ್ೀ ಆ್ ಮಿಷನ್ ಎ. ಅಮರನಾಥ್, ಲೂಲೂ ಗ್ರೂಪ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಯೂಸ್ು ಆಲಿ. ಅಬುಧಾಬಿ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಗ್ರೂಪ್ ಸಿಇಒ ಅಬ್ದುಲ್ಲಾ ಸೇಲಂ ಆಲ್ನುಯಿಮಿ, ಎಡಿಜಿಎಂ ರಿಜಿಸ್ಟ್ರೇಷನ್ ಅಥಾರಿಟಿ ಸಿಇಒ ಹಮದ್ ಸಯಾಹ್ ಅಲ್ ಮಜ್ರೂಯಿ ಇತರರು ಪಾಲ್ಗೊಂಡಿದ್ದರು.