ನ್ಯೂಸ್

ನಟಿ ರೇಖಾರಿಗೆ ಆತ್ಮೀಯ ಅಪ್ಪುಗೆ ನೀಡಿದ ಅಭಿಷೇಕ್ ಬಚ್ಚನ್; ವಿಡಿಯೋ ನೋಡಿ ನೆಟ್ಟಿಗರು ರಿಯಾಕ್ಷನ್​ ಹೀಗಿದೆ.. | Abhishek Bachchan

ಮುಂಬೈ: ಅಮಿತಾಭ್​​ ಬಚ್ಚನ್ ಮತ್ತು ರೇಖಾ ಪ್ರೀತಿಸುತ್ತಿದ್ದರು ಎಂಬ ಗಾಸಿಪ್​ ಹಲವು ವರ್ಷಗಳಿಂದ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಅಲ್ಲದೆ ಜಯಾ ಬಚ್ಚನ್​​​​ ಮತ್ತು ರೇಖಾ ನಡುವಿನ ಒಡನಾಟವು ಎಷ್ಟರ ಮಟ್ಟಿಗಿದೆ ಎಂಬುದು ಬಿಟೌನ್​ ಮಂದಿಗೆ ತಿಳಿದಿದೆ. ಯಾವುದಾದರೂ ಕಾರ್ಯಕ್ರಮದಲ್ಲಿ ಬಚ್ಚನ್​ ಫ್ಯಾಮಿಲಿ ಮತ್ತು ರೇಖಾ ಭಾಗವಹಿಸಿದ್ದರೆ ಒಬ್ಬರನೊಬ್ಬರು ಮಾತನಾಡಿಸುವುದು ತೀರಾ ವಿರಳ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ವಿಡಿಯೋವೊಂದು ಹರಿದಾಡುತ್ತಿದೆ. ಅದರಲ್ಲಿ ಬಿಗ್​​ಬಿ ಪುತ್ರನಾದ ನಟ ಅಭಿಷೇಕ್​ ಬಚ್ಚನ್ (Abhishek Bachchan)​ ರೇಖಾರಿಗೆ ಅಪ್ಪುಗೆ ನೀಡಿದ್ದಾರೆ.

ಹೌದು ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಭಾಗವಹಿಸಿದ್ದರು. ಇದರಲ್ಲಿ ರೇಖಾ, ಮುಮ್ತಾಜ್, ಊರ್ಮಿಳಾ ಮಾತೋಂಡ್ಕರ್, ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ಖುಷಿ ಕಪೂರ್, ಫರ್ಹಾನ್ ಅಖ್ತರ್, ಸೋನಮ್ ಕಪೂರ್ ಮತ್ತು ದಿಯಾ ಮಿರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಒಳಗಿನ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಅದರಲ್ಲಿ ಅಭಿಷೇಕ್ ಬಚ್ಚನ್​​ ಮತ್ತು ರೇಖಾ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಳ್ಳುತ್ತಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ ಇಬ್ಬರೂ ಇತರ ಸೆಲೆಬ್ರಿಟಿಗಳಂತೆ ಬಿಳಿ ಬಟ್ಟೆ ಧರಿಸಿರುವುದನ್ನು ಕಾಣಬಹುದು. ಇದರಿಂದ ಕಾರ್ಯಕ್ರಮದ ಥೀಮ್​​ ಬಿಳಿ ಬಣ್ಣ ಎಂದು ತಿಳಿಯುತ್ತದೆ. ಈ ಕ್ಲಿಪ್‌ನಲ್ಲಿ ಅಭಿಷೇಕ್ ವೇದಿಕೆಯ ಕಡೆಗೆ ನಡೆದುಹೋಗಿ ರೇಖಾರನ್ನು ಅಪ್ಪಿಕೊಳ್ಳುತ್ತಿರುವುದನ್ನು ನೋಡಬಹುದು. ನಂತರ ಅವರು ಹರಟೆ ಹೊಡೆಯುತ್ತಿರುವುದು ಸಹ ಕಂಡುಬಂದಿದೆ.

ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಷೇಕ್ ಮತ್ತು ರೇಖಾ ಭೇಟಿಯಾಗುವುದು ಅಪ್ಪಿಕೊಳ್ಳುವುದು ಬಿಡಿ ನನ್ನ ಬಿಂಗೊ ಕಾರ್ಡ್‌ನಲ್ಲಿ ಇರಲಿಲ್ಲ, ಸಾರ್ವಜನಿಕವಾಗಿ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ರೇಖಾ ಬಚ್ಚನ್ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಜಯಾ ಅವರೊಂದಿಗೆ ಸಹ ಹೀಗೆ ಮಾಡುತ್ತಾರೆ, ಅಭಿಷೇಕ್ ಯಾವಾಗಲೂ ಚೆನ್ನಾಗಿ ವಿದ್ಯಾವಂತನಾಗಿ ಮತ್ತು ಕನಿಷ್ಠ ರಾಜತಾಂತ್ರಿಕನಾಗಿ ಕಾಣುತ್ತಾನೆ ಇಲ್ಲಿಯೂ ಸಹ ಅವನು ಅದೇ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)