ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ( AishwaryaRai ) ಮತ್ತು ಅಭಿಷೇಕ್ ಬಚ್ಚನ್ ( AbhishekBachchan ) ಕೂಡಾ ಇದ್ದಾರೆ. ಕಳೆದ ಕೆಲವುದಿನಗಳಿಂದ ಈ ಜೋಡಿ ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿ ಇದೆ.
ಅಭಿಷೇಕ್ ತನ್ನ ಹೆತ್ತವರೊಂದಿಗೆ ಅನಂತ್ ಅಂಬಾನಿ ಅವರ ಮದುವೆಯಲ್ಲಿ ಭಾಗವಹಿಸಿದ್ದರು, ಆದರೆ ಐಶ್ವರ್ಯ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಂಡರು. ಐಶ್ವರ್ಯಾ ಅಥವಾ ಅಭಿಷೇಕ್ ಅವರ ಪ್ರತ್ಯೇಕತೆಯ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ( divorcerumours ) ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಎಲ್ಲಾ ಗೊಂದಲಗಳ ನಡುವೆ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಭಾಷಣೆಯ ಹಳೆಯ ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಹಳೆಯ ವೀಡಿಯೊದಲ್ಲಿ, ಐಶ್ವರ್ಯಾ ರೈ ಬಚ್ಚನ್ ತನ್ನ ಪತಿ ಅಭಿಷೇಕ್ ಬಚ್ಚನ್ ಮತ್ತು ಸೊಸೆ ನವ್ಯಾ ನವೇಲಿ ನಂದಾ ಮೇಲೆ ಕೋಪಗೊಂಡಿದ್ದಾರೆ . ಅಲ್ಲದೆ, ಈ ವೀಡಿಯೊ ಸಾಕಷ್ಟು ಕಣ್ಣುಗಳನ್ನು ಸೆಳೆದಿದೆ ಮತ್ತು ಅಭಿಷೇಕ್ ಜೊತೆ ಮಾತನಾಡಿದ ನಂತರ ಐಶ್ವರ್ಯಾ ಮೂಖದ ಮೇಲಿರುವ ಕೋಪ, ಸಿಟ್ಟನ್ನು ಅಭಿಮಾನಿಗಳು ಗಮನಿಸಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕೆಲವು ಕಾರ್ಯಕ್ರಮದಲ್ಲಿ ಜೊತೆಯಾಗಿ ದಂಪತಿ ಹೋದರೆ, ಪಾಪರಾಜಿಗಳು ಐಶ್ವರ್ಯಾ ಸಿಂಗಲ್ ಫೋಟೋ ಬೇಕೆಂದು ಮನವಿ ಮಾಡುತ್ತಾರೆ. ಈ ವಿಚಾರಕ್ಕೆ ಅನೇಕ ಬಾರಿ ಅಭಿಷೇಕ್ ಬಚ್ಚನ್ ಬೇಸರಗೊಂದು ಆಕೆಯ ಜೊತೆ ಜಗಳವಾಡುತ್ತಾ ಹೋಗಿರುವ ವಿಡಿಯೋ ಕಾಣಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಈಗ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರು ಜಗಳವಾಡಿರುವ ಹಳೆ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋ ಪಿಂಕ್ ಪ್ಯಾಂಥರ್ಸ್ ತಂಡ ಆಡುತ್ತಿರುವ ಕಬಡ್ಡಿ ಪಂದ್ಯದ್ದು. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್, ನವ್ಯಾ ನವೇಲಿ, ಮತ್ತು ಸಿಕಂದರ್ ಖೇರ್ ಗ್ಯಾಲರಿಯಲ್ಲಿ ಕುಳಿತು ತಂಡವನ್ನು ಹುರಿದುಂಬಿಸುತ್ತಿದ್ದರು.