ನ್ಯೂಸ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್- ಅವಿವಾ: ಫೋಟೋಗಳು ಇಲ್ಲಿವೆ...

ಬೆಂಗಳೂರು: ಅಭಿಷೇಕ್ ಅಂಬರೀಷ್, ಅವಿವಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಮದುವೆ ನೆರವೇರಿದೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿವೆ.


ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆಯುತ್ತಿದೆ. ಮುಂಜಾನೆಯೇ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದರು.

ಅಂಬರೀಷ್ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.ಗೌಡ ಸಂಪ್ರದಾಯಂತೆ ಈ ಜೋಡಿ ಮದುವೆಯಾಗಿದೆ.

ಬೆಂಗಳೂರಿನ ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30-10:30 ಮೂರ್ಹತದಲ್ಲಿ ಅಭಿಷೇಕ್ , ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ರು. ಇಬ್ಬರು ಒಟ್ಟಿಗೆ  ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.


ಅಂಬಿ ಪುತ್ರನ ಮದುವೆಗೆ ಕುಟುಂಬಸ್ಥರು, ಆಪ್ತರು ಖ್ಯಾತ ನಟಿ,ನಟರು ಹಾಗೂ ಸೂಪರ್​​ ಸ್ಟಾರ್​ ರಜನಿಕಾಂತ್​​ ಮೊದಲಾದವರು ಆಗಮಿಸಿದ್ದಾರೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.

ಆರತಕ್ಷತೆ, ಬೀಗರ ಊಟ ಕೂಡ ನಡೆಯಲಿದೆ. ಕಳೆದ ನಾಲ್ಕು ದಿನಗಳಿಂದಲೇ ಅಂಬಿ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿತ್ತು. ಜೂನ್‌ 7ರಂದು ಗ್ರ್ಯಾಂಡ್‌ ರಿಸೆಪ್ಷನ್‌ ನೆರವೇರಲಿದೆ.

ಕಳೆದ ಶುಕ್ರವಾರ ಅರಿಶಿಣ ಶಾಸ್ತ್ರ ಮುಗಿಸಿರುವ ಅಭಿಷೇಕ್‌ ಮತ್ತು ಅವಿವಾ, ಭಾನುವಾರ ಕೈಗೆ ಮೆಹೆಂದಿ ಹಚ್ಚಿಕೊಂಡು ಮದುವೆ ಕಳೆಯಲ್ಲಿ ಮಿಂಚುತ್ತಿದ್ದರು. ಅವರ ಮೆಹೆಂದಿಯ ಸುಂದರ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕಳೆದ ನಾಲ್ಕೈದು ವರ್ಷಗಳಿಂದ ಅಭಿಷೇಕ್‌ ಅಂಬರೀಶ್‌- ಅವಿವ ಬಿದ್ದಪ್ಪ ಪ್ರೀತಿ ಮಾಡುತ್ತಿದ್ದರು. ಅಭಿಷೇಕ್ ಅವರು ವಿದೇಶದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆ ವೇಳೆ ಅಲ್ಲಿ ಅವಿವಾ ಅವರ ಪರಿಚಯ ಆಗಿದೆ ಎನ್ನಲಾಗುತ್ತದೆ.