ಮಂಡ್ಯ: ಇತ್ತೀಚೆಗೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಅಭಿ-ಅವಿವಾ ಜೋಡಿ ಕನ್ನಡ ನಾಡಿನ ಗಮನ ಸೆಳೆದಿದ್ದರು. ಮದುವೆ ಆದ ಮೇಲೆ ಬೀಗರೂಟ ಇಲ್ಲದಿದ್ದರೆ ಹೇಗೆ? ಮಂಡ್ಯ ಎಂದರೆ ಬೀಗರೂಟಕ್ಕೆ ಫೇಮಸ್. ಈ ಹಿನ್ನೆಲೆಯಲ್ಲಿ ಇದೀಗ ಬೀಗರೂಟಕ್ಕೆ ಮದ್ದೂರು ಗೆಜ್ಜಲಗೆರೆ ಸಜ್ಜಾಗಿದೆ.
ಈ ದಿನ ಅಭಿ ಹಾಗೂ ಅವಿವಾ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಕನ್ನಡ ಚಿತ್ರರಂಗದ ಕೆಲ ತಾರೆಯರು ಕೂಡ ಅಂಬಿ ಮನೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮಂಡ್ಯ ಜನತೆಗೆ ಅಂಬಿ ಕುಟುಂಬ ಜರ್ಮನ್ ಟೆಂಟ್ ಹಾಕಿದ್ದು ಅದರ ಕೆಳಗೆ ಯಂಗ್ ರೆಬಲ್ ಸ್ಟಾರ್ನ ಅದ್ಧೂರಿ ಬೀಗರೂಟ ನಡೆಯಲಿದೆ. ಬೆಳಗ್ಗೆ 11:00 ಗಂಟೆಯಿಂದಲೇ ಬಿಸಿ ಬಿಸಿ ಬಾಡೂಟ ಶುರುವಾಗಲಿದೆ ಎನ್ನಲಾಗಿದೆ.
ಜರ್ಮನ್ ಟೆಂಟ್ ಹೇಗಿದೆ? ಇಲ್ಲಿ ನೋಡಿ:
ನಾನ್ ಸ್ಟಾಪ್ ಭಕ್ಯ್ಯ ಭೋಜನ ಬಾಡೂಟ ಎಲ್ಲರ ಗಮನ ಸೆಳೆಯಲಿದ್ದು ದೊಡ್ಡ ಮೈದಾನದಲ್ಲಿ ನಾನ್‌ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ. ಈ ದಿನ ಸುಮಾರು 1 ಲಕ್ಷ ಜನ ಸೇರುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ 15 ಎಕರೆ ಜಾಗದಲ್ಲಿ ಶಾಮಿಯಾನ ಹಾಕಲಾಗಿದೆ.
ಬೆಳಗ್ಗೆ 11 ಗಂಟೆಗೇ ಊಟದ ವ್ಯವಸ್ಥೆ ಶುರುವಾಗಲಿದ್ದು ಸಂಜೆ ಎಲ್ಲಿವರೆಗೂ ಜನ ಬರ್ತಾರೋ ಅಲ್ಲಿವರೆಗೂ ಊಟ ನೀಡಲಾಗುತ್ತದೆ ಎನ್ನಲಾಗಿದೆ. ಮೂರು ಜನ ಅಡುಗೆ ಕ್ರೇಟರ್ಗಳು ಊಟಕ್ಕೆ ಪ್ಲಾನ್ ಮಾಡಿದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೊತ್ತಿದ್ದಾರೆ ಎನ್ನಲಾಗಿದೆ.
ಬೀಗರೂಟದ ವಿಚಾರಕ್ಕೆ ಬಂದರೆ ಮಂಡ್ಯದಲ್ಲಿ ಬಾಡೂಟ ಫೇಮಸ್. ಸಾಮಾನ್ಯವಾಗಿ ಬೀಗರೂಟದಲ್ಲಿ ಮಟನ್, ಚಿಕನ್ನದ್ದೇ ಪಾರುಪತ್ಯ ಜೋರಾಗಿರುತ್ತದೆ. ಅಭಿ-ಅವಿವಾ ಮದುವೆಯ ಬೀಗರೂಟಕ್ಕೆ ಬರೋಬ್ಬರಿ 7 ಟನ್ ಮಟನ್, 7 ಟನ್ ಚಿಕನ್ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಮಂಡ್ಯದ ಸ್ಥಳೀಯ ಬಾಣಸಿಗರಿಗೆ ಅಡುಗೆ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ
ಮೆನು ಏನು?
ಬೀಗರೂಟದ ಮೆನುನಲ್ಲಿ ಮಟನ್ ಕರಿ, ರಾಗಿ ಮುದ್ದೆ, ಬೋಟಿ ಗೊಜ್ಜು, ಕೈಮಾ, ಪಾಯಸ, ಚಿಕನ್ ಫ್ರೈ, ಗೀ ರೈಸ್, ಅನ್ನ ರಸಂ, ಬೀಡ, ಐಸ್‌ಕ್ರೀಂ ಇರಲಿದೆ. ಪಕ್ಕಾ ನಾಟಿ ಸ್ಟೈಲ್‌ನಲ್ಲಿ ಬೀಗರೂಟ ಸಿದ್ಧವಾಗಲಿದೆ.