ನವದೆಹಲಿ: ಅರವಿಂದ್ ಕೇಜ್ರಿವಾಲ ಅವರು ಭಯೋತ್ಪಾದಕರಾಗಿದ್ದರೆ ಅವರನ್ನು ಬಂಧಿಸಲಿ, ಇದು ನಾನು ಬಿಜೆಪಿಗೆ ಮಾಡುತ್ತಿರುವ ಚಾಲೆಂಜ್ ಎಂದು ಆಪ್ ಸಂಸದ ಸಂಜಯ್ ಸಿಂಗ್ ಸವಾಲೊಡ್ಡಿದ್ದಾರೆ.
ಈ ಮೊದಲು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಅರವಿಂದ ಕೇಜ್ರಿವಾಲ ಅವರು ಅಮಾಯಕರಂತೆ ಮುಖ ಮಾಡಿಕೊಂಡಿರುತ್ತಾರೆ. ನಾನು ಭಯೋತ್ಪಾದಕನಾ ಎಂದು ಕೇಳುತ್ತಾರೆ. ಆದರೆ ಅವರು ಭಯೋತ್ಪಾದಕರೇ. ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿದ್ದರು.
ಕೇಜ್ರಿವಾಲ್ ಅವರು ತಮ್ಮನ್ನು ತಾವು ಅರಾಜಕವಾದಿ ಎಂದು ಕರೆದುಕೊಳ್ಳುತ್ತಾರೆ. ಹಾಗಾದರೆ ಅರಾಜಕವಾದಿಯಾದರೆ ಭಯೋತ್ಪಾದಕರಿಗೂ ನಿಮಗೂ ವ್ಯತ್ಯಾಸವೇನು? ನೀವೂ ಭಯೋತ್ಪಾದಕರೇ ಎಂದು ಜಾವಡೇಕರ್ ಜರಿದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಸಂಜಯ್ ಸಿಂಗ್, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ಇರುವ, ರಾಷ್ಟ್ರ ರಾಜಧಾನಿಯಲ್ಲಿ ಒಬ್ಬ ಸಚಿವರು ಇಂತಹ ಭಾಷೆ ಬಳಸುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. (ಏಜೆನ್ಸೀಸ್)