ನವದೆಹಲಿ: ದೆಹಲಿಯ ಗದ್ದುಗೆಯನ್ನು ಮೂರನೇ ಬಾರಿಗೆ ಏರಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 28ರಲ್ಲಿ ಜಯ ಸಾಧಿಸಿದ್ದು, 35ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆಯೇ ನಟ ಶಾರುಖ್ ಖಾನ್ ಅವರ ವಿಡಿಯೋ ಹರಿಬಿಟ್ಟು ವಿಭಿನ್ನವಾಗಿ ಭಾವನೆಯನ್ನು ಆಪ್ ವ್ಯಕ್ತಪಡಿಸಿದೆ.
ಮಧ್ಯಾಹ್ನ 2.45ರ ಸುಮಾರಿಗೆ ಟ್ವೀಟ್ ಮಾಡಿರುವ ಆಪ್, ಶಾರುಖ್ ಅಭಿನಯದ ಚೆಕ್ ದೇ ಇಂಡಿಯಾ ಚಿತ್ರದ ಭಾವನಾತ್ಮಕ ಸನ್ನಿವೇಶದ ವಿಡಿಯೋವೊಂದನ್ನು ಹರಿಬಿಟ್ಟಿದೆ.
ವಿಡಿಯೋದಲ್ಲಿ ಏನಿದೆ?: ಚಕ್ ದೇ ಇಂಡಿಯಾ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಫೈನಲ್ ಪಂದ್ಯದಲ್ಲಿ ಭಾರತದ ಹಾಕಿ ತಂಡವು ಜಯಿಸಿದಾಗ ಕೋಚ್ ಶಾರುಖ್ ತುಂಬಾ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಇದೇ ದೃಶ್ಯವನ್ನು ಎಡಿಟ್ ಮಾಡಿ ಆಪ್ ಶೇರ್ ಮಾಡಿಕೊಂಡಿದ್ದು, ದೆಹಲಿ ಚುನಾವಣೆಯಲ್ಲಿನ ತಮ್ಮ ಗೆಲುವನ್ನು ವ್ಯಕ್ತಪಡಿಸಿದೆ.
ಸದ್ಯದ ಟ್ರೆಂಟ್ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಆಪ್ 63 ಹಾಗೂ ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಖಾತೆಯನ್ನೇ ತೆರದಿಲ್ಲ. (ಏಜೆನ್ಸೀಸ್)