ನ್ಯೂಸ್

ಬಾಲಿವುಡ್ ನಟ ಅಮೀರ್ ಖಾನ್​ ತಾಯಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀನತ್​ ಹುಸೇನ್​ ಅವರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಜೀನತ್​ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆರಂಭದಲ್ಲಿ ಅಮೀರ್ ಖಾನ್ ಅವರು ತನ್ನ ತಾಯಿಯ ಹುಟ್ಟುಹಬ್ಬವನ್ನು ಕುಟುಂಬಸ್ಥರೊಂದಿಗೆ ಅದ್ದೂರಿಯಾಗಿ ಆಚರಿಸಿದ್ದರು. ಬರ್ತ್​ಡೇ ಪಾರ್ಟಿಗೆ ಅಮೀರ್​ರ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಮಗ ಆಜಾದ್ ಕೂಡ ಪಾಲ್ಗೊಂಡಿದ್ದರು.

ಜೀನತ್​ ಹುಸೇನ್​ ಅವರು ಬೇಗ ಗುಣಮುಖರಾಗಲೆಂದು ಅಮೀರ್ ಖಾನ್​ರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.